ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿ ಮೋಕ್ಷಾ ಬಿ. ಇವರು ೨೦೨೩ ನೇ ವರ್ಷ ಮಂಗಳೂರು ವಿಶ್ವವಿದ್ಯಾನಿಲಯವು ನಡೆಸಿದ ಬಿ.ಎ. ಪದವಿಯ ಐದನೇ ಸೆಮೆಸ್ಟರ್‌ನ’ಅಂತರಾಷ್ಟ್ರೀಯ ಸಂಬಂಧಗಳ ಪರಿಚಯ’ ಮತ್ತು ಆರನೇ ಸೆಮೆಸ್ಟರ್‌ನ’ಅಂತರಾಷ್ಟ್ರೀಯ ರಾಜಕೀಯದ ಸಮಕಾಲೀನ ಸಮಸ್ಯೆಗಳು’ ವಿಷಯಗಳ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಚಿನ್ನದ ಪದಕ ಪಡೆಯಲು ಆಯ್ಕೆಯಾಗಿರುತ್ತಾರೆ.