ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಚೆಕ್ ಹಸ್ತಾಂತರ
Saturday, June 15, 2024
ಮುಲ್ಕಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಲ್ಲಿ ಕಳೆದ 20 ವರ್ಷದಿಂದ ಪಡುಪಣoಬೂರಿನ ಮಣಿಕಂಠ ಸ್ವಸಹಾಯ ಸಂಘದ ಫಲಾನುಭವಿ ಸದಸ್ಯರಾಗಿದ್ದ ತೋಕೂರಿನ ವಾಮನ ಬಂಗೇರರವರು ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿರುತ್ತಾರೆ. ಅವರ ಪತ್ನಿ ಸುಶೀಲರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅನುದಾನವನ್ನು ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡರವರು 25000/- ಮೊತ್ತದ ಚೆಕ್ ನ್ನು ಹಸ್ತಾಂತರಿಸಿದರು.
ಈ ಸಂದರ್ಭ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಯೋಜನಾದಿಕಾರಿ ಕರುಣಾಕರ ಆಚಾರ್ಯ, ತಾಲೂಕು ಒಕ್ಕೂಟದ ಅಧ್ಯಕ್ಷ ಹರೀಶ್, ನೂತನವಾಗಿ ಆಯ್ಕೆಯಾದ ರಾಜೇಶ್. ಮೇಲ್ವಿಚಾರಕ ನಿಶ್ಮಿತಾ ಶೆಟ್ಟಿ, ಸೇವಾಪ್ರತಿನಿಧಿ ಸವಿತ ಶರತ್ ಬೆಳ್ಳಾಯರು, ಬೆಳ್ಳಾಯರು ಒಕ್ಕೂಟದ ಅಧ್ಯಕ್ಷ ರಾದ ಚಂಪಾ ಉಪಸ್ಥಿತರಿದ್ದರು.