ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿ - ಸೂರ್ಯಕಾಂತ ಜೆ ಸುವರ್ಣ
Sunday, June 16, 2024
ಮೂಲ್ಕಿ:ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿ ಕೊಂಡಾಗ ಸರ್ವತೋಮುಖವಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಜೀವನದಲ್ಲಿ ಸಾಧನೆ ಮಾಡಲು ಪ್ರಯತ್ನಿಸಬೇಕೆಂದು ಭಾರತ್ ಕೋ ಆಪರೇಟಿವ್ ಬ್ಯಾಂಕ್ ಮುಂಬೈನ ಕಾರ್ಯಾಧ್ಯಕ್ಷ, ಶ್ರೀ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯ ಸೂರ್ಯಕಾಂತ ಜೆ ಸುವರ್ಣ ಹೇಳಿದರು.ಅವರು ಮೂಲ್ಕಿಯ ಶ್ರೀ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಸಂಸ್ಥೆ ಯ ಲೀಲಾವತಿ ಜಯ ಸಿ ಸುವರ್ಣ ತೆರೆದ ಸಭಾಂಗಣದಲ್ಲಿ ನಡೆದ ಶಾಲೆಯ 2024 25 ನೇ ಸಾಲಿನ ಶೈಕ್ಷಣಿಕ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮೂಲ್ಕಿಯ ಶ್ರೀ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭಾಸ್ಕರ ಸಾಲಿಯಾನ್ ರವರು ಚೆಸ್ ಆಡುವುದರ ಮೂಲಕ 2024 25 ನೇ ಸಾಲಿನ ಚೆಸ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಹರೀಂದ್ರ ಸುವರ್ಣ, ಕಾರ್ಯದರ್ಶಿಗಳಾದ ಬಾಲಚಂದ್ರ ಸನಿಲ್, ಆಡಳಿತ ಮಂಡಳಿಯ ಸದಸ್ಯರು , ಸಂಸ್ಥೆಯ ಆಡಳಿತ ಅಧಿಕಾರಿ ಶ್ರೀಮತಿ ಮಂಜುಳಾ, ಪ್ರಾಂಶುಪಾಲರಾದ ಯತೀಶ ಅಮೀನ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ಗೀತಾ, ಪಠ್ಯೇತರ ಚಟುವಟಿಕೆಗಳ ತರಬೇತುದಾರರಾದ ಭರತನಾಟ್ಯ ಕಲಾವಿದ ಸುದರ್ಶನ್, ಯಕ್ಷಗಾನ ತರಬೇತುದಾರ ನಿತಿನ್ ಆಚಾರ್ಯ ಪಡುಬಿದ್ರಿ, ಜಾನಪದ ತರಬೇತುದಾರ ಹರ್ಷಿತ್, ಚೆಸ್ ತರಬೇತುದಾರ ಶ್ರೀಮತಿ ಸೌಂದರ್ಯ, ಕರಾಟೆ ತರಬೇತುದಾರರಾ ಶ್ರೀ ಪ್ರಕಾಶ್, ಫ್ಯಾಷನ್ ಡಿಸೈನಿಂಗ್ ತರಬೇತುದಾರಶ್ರೀಮತಿ ಪ್ರತಿಭಾ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕಿ ಸುಶ್ಮಿತಾ ಸ್ವಾಗತಿಸಿದರು, ಸುರೇಖಾ ವಂದಿಸಿದರು. ಶಿಕ್ಷಕಿ ಪ್ರತಿಭಾ ಕಾರ್ಯಕ್ರಮ ನಿರೂಪಿಸಿದರು.