ಶ್ರೀ ಸುಬ್ರಹ್ಮಣ್ಯ ದೇವರ ಪ್ರತಿಷ್ಟಾಪನಾ ಮಹೋತ್ಸವದ ವರ್ಷಾಚರಣೆ
Saturday, May 11, 2024
ಕಿನ್ನಿಗೋಳಿ : ತೋಕೂರಿನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೇ 12 ರ ರವಿವಾರದಂದು ಶ್ರೀ ಸುಬ್ರಹ್ಮಣ್ಯ ದೇವರ ಪ್ರತಿಷ್ಟಾಪನಾ ಮಹೋತ್ಸವದ ವರ್ಷಾಚರಣೆಯ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳು ವೇದಮೂರ್ತಿ ಶಿಬರೂರು ಶ್ರೀ ಗೋಪಾಲಕೃಷ್ಣ ತಂತ್ರಿಯವರ ಮಾರ್ಗದರ್ಶನದಲ್ಲಿ ನಡೆಯಲಿದೆ.ಮೇ 12 ರ ಆದಿತ್ಯವಾರ ಬೆಳಿಗ್ಗೆ 6ಕ್ಕೆ ಪಂಚಾಮೃತ ಅಭಿಷೇಕ,
8-10ರ ವೃಷಭ ಲಗ್ನದಲ್ಲಿ ನವಚತ್ವಾರಿಂಷತ್ ಕಲಶಾಭಿಷೇಕ,ಶ್ರೀ ಸುಬ್ರಹ್ಮಣ್ಯ ದೇವರಿಗೆ : ಪ್ರಸನ್ನ ಪೂಜೆ,ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ,ಸಂಜೆ 6-30ಕ್ಕೆ ದೊಡ್ಡ ರಂಗಪೂಜೆ , 7-30ಕ್ಕೆ ಬಲಿಮಹೋತ್ಸವವು ನಡೆಯಲಿರುವುದುದೆಂದು ಪ್ರಕಟಣೆ ತಿಳಿಸಿದೆ..