Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲಿನಲ್ಲಿ ಸಂಗೀತ ತರಬೇತಿ ಶಿಬಿರ

ಕಟೀಲು : ಸಂಗೀತದಿಂದ ಆನಂದ ಸಿಗುತ್ತದೆ ಎಂದು ಕಟೀಲು ದೇಗುಲದ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ ಹೇಳಿದರು. 
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅಕ್ಷರಾನ್ನಂ ಸಭಾಂಗಣದಲ್ಲಿ ಬಜಪೆ ಶಾಂತಿ ಕಲಾ ಕೇಂದ್ರ ಮತ್ತು ಪುತ್ತೂರು ಸಾಧನಾ ಸಂಗೀತ ಪ್ರತಿಷ್ಟಾನಗಳ 
ಸಹಯೋಗದಲ್ಲಿ ನಡೆಯುವ ಎರಡು ದಿನಗಳ ಕೃತಿಗಳು ಹಾಗೂ ದಾಸರ ಪದಗಳ ಸಂಗೀತ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಂಗೀತ ಶಿಕ್ಷಕಿ ವಿದುಷಿ ಡಾ. ಸುಚಿತ್ರಾ ಹೊಳ್ಳ, ಕಲಾಕೇಂದ್ರದ ಚಂದ್ರಲಾ ಉಪಸ್ಥಿತರಿದ್ದರು.