Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಶೃಂಗೇರಿ ಮಠ ಲೇಖನಗಳ ಪುಸ್ತಕ ಬಿಡುಗಡೆ


ಹಳೆಯಂಗಡಿ : ಖ್ಯಾತ ಇತಿಹಾಸಕಾರರಾದ ಡಾ. ಕೆ.ಜಿ ವಸಂತಮಾಧವ ಕೊಡಂಚರವರ ಶೃಂಗೇರಿ ಮಠದ  ಅಧ್ಯಯನ ಲೇಖನಗಳ ಸಂಗ್ರಹ "ಶೃಂಗೇರಿ ಮಠ"ವನ್ನು ಶಂಕರ ಜಯಂತಿಯ ಸಂದರ್ಭದಲ್ಲಿ ನಾಗವೃಜ ಕ್ಷೇತ್ರ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿಯ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ಯಾಜಿ ಎಚ್ ನಿರಂಜನ ಭಟ್, ಆಡಳಿತ ಮೊಕ್ತೇಸರ ಎಂ ಶಶೀಂದ್ರ ಕುಮಾರ್, ಶುಂಠಿಪಾಡಿ ಮೋಹನ್ ರಾವ್ ಮೂಲ್ಕಿ ಉಪಸ್ಥಿತರಿದ್ದರು.