Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲು:ಮುಂಡ್ರು ಸಣ್ಣ ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮ


ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ಕಾಲೇಜಿನ ಕನ್ನಡ ಉಪನ್ಯಾಸಕ ,ಯುವ ಬರಹಗಾರ , ಮಂಗಳೂರು ಆಕಾಶವಾಣಿಯ ಸಾಂದರ್ಭಿಕ ಉದ್ಘೋಷಕ , ನಿರೂಪಕ ಪ್ರದೀಪ್  ಡಿ.ಎಮ್.ಹಾವಂಜೆ ಇವರ  
ಮುಂಡ್ರು ಸಣ್ಣ ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮವು ಕಟೀಲು ಪ್ರಥಮ ದರ್ಜೆ ಕಾಲೇಜಿನ ವಾಗ್ಧೇವಿ ಸಭಾಂಗಣದಲ್ಲಿ ನಡೆಯಿತು, ಕಾಲೇಜಿನ ಪ್ರಾಂಶುಪಾಲ  ಡಾ। ವಿಜಯ್ .ವಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಟೀಲು ದೇವಳದ ಅನುವಂಶಿಕ  ಅರ್ಚಕ  ಹರಿನಾರಾಯಣದಾಸ ಆಸ್ರಣ್ಣ ಅವರು ಆಶೀರ್ವಚನ ನೀಡಿ ಕಟೀಲು ದೇವಳದ ವಿದ್ಯಾಸಂಸ್ಥೆಗಳು  ಕನ್ನಡ -ಸಾಹಿತ್ಯ ಕಲೆಗಳಿಗೆ ಹೆಚ್ಚಿನ  ಕಾಳಜಿ ಮತ್ತು ಸಹಕಾರವನ್ನು ನೀಡುತ್ತ ಬಂದಿದ್ದು, ನುಡಿ ಹಬ್ಬದ ಸಂಭ್ರಮ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಉಪನ್ಯಾಸಕ  ಪ್ರದೀಪ್ ಹಾವಂಜೆಯವರ  ಮುಂಡ್ರು ಸಣ್ಣ ಕಥಾ ಸಂಕಲನವು ಸಾಹಿತ್ಯ ಆಸಕ್ತ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮಾರ್ಗದರ್ಶನವಾಗಲೆಂದು  ಆಶಿಸಿ ಸಾಹಿತ್ಯದ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ ಎಂದು  ಶುಭ ಹಾರೈಸಿದರು. 
ನಂತರ ಹಿರಿಯ ಸಾಹಿತಿ  ಮುರುಳಿಧರ ಉಪಾಧ್ಯಾಯ ,ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ   ದೇವು ಹನೆಹಳ್ಳಿ ,ಕ್ರೀಡಾ ಭಾರತಿಯ ಅಧ್ಯಕ್ಷ ,ನಿವೃತ್ತ ದೈಹಿಕ ಶಿಕ್ಷಕ ಕಾರಿಯಪ್ಪ ರೈ ,ಪ್ರದೀಪ್ ಡಿ.ಎಮ್ ಹಾವಂಜೆ , ಶ್ರೀಮತಿ ಚೈತ್ರ ಎಸ್.ಎಸ್, ಪುಟಾಣಿ ಆಧ್ಯಾ ಅವರನ್ನು ಶ್ರೀ  ದೇವಿಯ ಶೇಷವಸ್ತ್ರ ,ಸ್ಮಾರಣೆಯೊಂದಿಗೆ ಗೌರವಿಸಲಾಯಿತು.                    
 ಹಿರಿಯ ಸಾಹಿತಿ, ನಿವೃತ್ತ ಕನ್ನಡ ಪ್ರೊ.ಮುರುಳಿಧರ್ ಉಪಾಧ್ಯಾಯರು ಕೃತಿ ಬಿಡುಗಡೆಗೊಳಿಸಿ  ಉಪನ್ಯಾಸಕ ಪ್ರದೀಪ್ ಅವರ ಮೂಲ ಆಶಯ, ಕಥೆಯ ಸಾಮಾಜಿಕ ಬದ್ಧತೆ, ಕಥಾ ಸಂಕಲನದ ಉಳಿದ ಕಥೆಗಳಾದ ಸೀತಕ್ಕ , ಕಂಡು ಕಾಣದಾವರು ,    ವಯಸ್ಸು -ಮನಸ್ಸು , ಕಥೆಯ ಆಶಯವನ್ನು ತಿಳಿಸಿದರು. ವಿದ್ಯಾರ್ಥಿಗಳೊಂದಿಗೆ ಸಾಹಿತ್ಯಕ್ಕೆ ಸಂಬಂಧಿಸಿದ ರಸ ಪ್ರಶ್ನೆಗಳನ್ನು ನಡೆಸಿ ವಿಜೇತ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನವನ್ನು ನೀಡಿದರು. ಮುಖ್ಯ ಅತಿಥಿಯಾಗಿ  ಲೇಖಕ , ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ  ದೇವು ಹನೆಹಳ್ಳಿ ಮಾತನಾಡಿ  ವಿದ್ಯಾರ್ಥಿಗಳ ಅಮೂಲ್ಯವಾದ ಜೀವನದ ಬಗ್ಗೆ ತಿಳಿಸಿ ಭಾವನಾತ್ಮಕ ಜೀವನಕ್ಕೆ ಬೆಲೆಯನ್ನು ನೀಡಬೇಕಾಗಿದೆ.ಬರೆಯುವ ಓದುವ ಸಂಸ್ಕೃತಿ ನಮ್ಮೆಲ್ಲರ ನೋವು ಒತ್ತಡಗಳನ್ನು ನಿವಾರಿಸುವ ಶಕ್ತಿ ಸಾಮಾರ್ಥ್ಯ ಹೊಂದಿದೆ.  ಜೀವ- ಜೀವನ ಅಮೂಲ್ಯವಾದದ್ದು.ಗುರಿ ಓದಿನ ಹಂಬಲ ಹಾಗೂ  ಮುಂಡ್ರು ಕಥಾ ಸಂಕಲನದ ಬಗ್ಗೆ ತಿಳಿಸಿದರು. 
 ನಿವೃತ್ತ ದೈಹಿಕ ಶಿಕ್ಷಕ ,ಕ್ರೀಡಾ ಭಾರತೀ ಅಧ್ಯಕ್ಷ  ಕಾರಿಯಪ್ಪ ರೈ   ಅವರು  ವಿದ್ಯಾಸಂಸ್ಥೆಯ ಸ್ವಚ್ಛತೆ ಹಾಗೂ ವಿದ್ಯಾರ್ಥಿಗಳ ಆಸಕ್ತಿ, ಕ್ರೀಡಾ ಭಾರತೀಯ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಪ್ರದೀಪ್ ಹಾವಂಜೆಯವರ ಸಾಹಿತ್ಯ ಕಲೆ ಶಿಕ್ಷಕ ವೃತ್ತಿಯ ಬಗ್ಗೆ ಕಳೆದ ಏಳು ವರುಷಗಳಲ್ಲಿ ಸಹೋದ್ಯೋಗಿಯಾಗಿ ಕಂಡ ಬಗ್ಗೆ ತಿಳಿಸಿದರು. 

ಮುಂಡ್ರು ಸಣ್ಣ ಕಥಾ ಸಂಕಲನದ ಮುಖಪುಟವನ್ನು ಚಿತ್ರಿಸಿದ ರಾಷ್ಟ್ರಮಟ್ಟದ ಚಿನ್ನದ ಪದಕ ವಿಜೇತ ಚಿತ್ರಕಲಾ ಶಿಕ್ಷಕ ಉಮೇಶ್ ನೆಂತಿಕಲ್ಲು ಅವರನ್ನು ಗೌರವಿಸಲಾಯಿತು.ಬಳಿಕ ಮಾತನಾಡಿದ ಅವರು  ಕನ್ನಡ ಉಪನ್ಯಾಸಕ ,ಕೃತಿಯ ಕತೃ  ಪ್ರದೀಪ್  ಡಿ.ಎಮ್.ಹಾವಂಜೆಯವರು ಮುಂಡ್ರು ಸಣ್ಣ ಕಥಾಸಂಕಲನ ಬರೆಯಲು ಪ್ರೇರಣೆಯಾದ ಘಟನೆಗಳು, ಕನ್ನಡ ಸಾಹಿತ್ಯ ಕಲೆಗಳ ಬಗ್ಗೆ ತಿಳಿಸಿದರು. 
ಕಟೀಲು ವಿದ್ಯಾ ಸಂಸ್ಥೆಯಲ್ಲಿ ನಡೆಸುವ ಭ್ರಮರ ಇಂಚರ ನುಡಿ ಹಬ್ಬಕ್ಕೆ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಪ್ರೇರಣೆಯಾಗಲಿಎಂದರು .  

ಕನ್ನಡ ಸಾಹಿತ್ಯ ಕವನ ಕಥೆ ಪ್ರಬಂಧ ,ಗಾಯನ , ಭಾಷಣ ,ಲೇಖನವನ್ನು ಬರೆದು ಯುವ ಬರಹಗಾರರ ಹಾದಿಯಲ್ಲಿ ಸಾಗುತ್ತಿರುವ ಒಟ್ಟು ಇಪ್ಪತ್ತು ವಿದ್ಯಾರ್ಥಿಗಳನ್ನು ಹಿರಿಯ ಸಾಹಿತಿ ಹಾಗೂ ಗಣ್ಯರ ಮೂಲಕ ಗೌರವಿಸಲಾಯಿತು. 

ಕಾಲೇಜು ಪ್ರಾಂಶುಪಾಲ ಡಾ।ವಿಜಯ್ .ವಿ ಅವರು ಕಥಾ ಸಂಕಲನ ಬಿಡುಗಡೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿ ಶುಭ ಹಾರೈಸಿದರು.

ವಿದ್ಯಾರ್ಥಿನಿ ದಿಶಾ ಶೆಟ್ಟಿ ಹಾಗೂ ರಂಜನಾ ಭಟ್ ಸಾಹಿತಿ ಮತ್ತು ಲೇಖಕರ ಪರಿಚಯನ್ನು ನಡೆಸಿಕೊಟ್ಟರು. 







ಕಾರ್ಯಕ್ರಮದಲ್ಲಿ ಕಟೀಲು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಚಂದ್ರಶೇಖರ್ ಭಟ್ , ಸಮಾಜಸೇವಕ  ಶೇಖರ್ ಹಾವಂಜೆ ,ಇಂಗ್ಲೀಷ್ ಉಪನ್ಯಾಸಕ  ಪೊನ್ನಣ್ಣ ,ಶ್ರೀಮತಿ ಮಾಲಾತಿ ಮೇಡಂ,  ಉಪನ್ಯಾಸಕ  ರೋಹಿತ್ ಕಡಬ ,  ವಾಣಿಜ್ಯ ವಿಭಾಗದ ಉಪನ್ಯಾಸಕರುಗಳು ,ಶಿಕ್ಷಕೇತರ ಸಿಬ್ಬಂದಿಗಳು ,ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.  ಕನ್ನಡ ಉಪನ್ಯಾಸಕ ಪ್ರದೀಪ್ ಡಿ.ಎಮ್ ಹಾವಂಜೆ ಸ್ವಾಗತಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ। ಪದ್ಮನಾಭ ಮರಾಠೆ  ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿನಿ ಲಾವಣ್ಯ ಮತ್ತು ಪೂಜಾ ಪ್ರಾರ್ಥನೆಯನ್ನು ನೆರವೇರಿಸಿದರು.


 ಲೋಕಯ್ಯಾ ಶಿಕ್ಷಕೇತರ ಸಿಬ್ಬಂದಿಗಳು ಸಹಕರಿಸಿದರು.