ಮೇ 12 -ದೇಲಂತಬೆಟ್ಟು ಶ್ರೀ ಜನಾರ್ಧನ ದೇವಸ್ಥಾನದ ಜಾತ್ರಾ ಮಹೋತ್ಸವ
Sunday, May 5, 2024
ಕಟೀಲು : ಶ್ರೀ ಜನಾರ್ಧನ ದೇವಸ್ಥಾನ ದೇಲಂತಬೆಟ್ಟು ಶಿಬರೂರು ಇದರ ವಾರ್ಷಿಕ ಜಾತ್ರಾ ಮಹೋತ್ಸವವು ಮೇ 12 ರಿಂದ ಶ್ರೀ ಜನಾರ್ಧನ ದೇವಸ್ಥಾನದಲ್ಲಿ ನಡೆಯಲಿದೆ.
ಜಾತ್ರಾ ಪ್ರಯುಕ್ತ ಬೆಳಿಗ್ಗೆ ಶ್ರೀ ದೇವರಿಗೆ 108 ಕಲಶಾಭಿಷೇಕ, ಪ್ರಧಾನ ಹೋಮ ಆದಿತ್ಯ ಹೃದಯ ಮಂತ್ರಹೋಮ, ಮಹಾಪೂಜೆ, ಉಳ್ಳಾಯ ಕೊಡಮಣಿತ್ತಾಯ ದೈವಗಳಿಗೆ ಪರ್ವ,_ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ರಾತ್ರಿ 7 ಗಂಟೆಗೆ ಮಹಾ ರಂಗಪೂಜೆ, ಉತ್ಸವ ಬಲಿ, ರಥೋತ್ಸವ, ಪ್ರಸಾದ ವಿತರಣೆ ಬಳಿಕ ರಾತ್ರಿ 8 ಕ್ಕೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.