ಕಿನ್ನಿಗೋಳಿ : ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಓದುವ ಮಂದಿ ಕಡಿಮೆ ಆಗುತ್ತಿದ್ದಾರೆ ಎನ್ನುವ ಮಾತಿದೆ.
ಸಾಹಿತ್ಯ ಕಾರ್ಯಕ್ರಮಗಳ ಹೆಚ್ಚು ಹೆಚ್ಚು ಆಯೋಜನೆಗೊಂಡು ಸಾಹಿತ್ಯ ಓದುವಿಕೆಯ ಆಸಕ್ತಿ ಜನರಲ್ಲಿ ಹೆಚ್ಚಾಗಲಿ ಎಂದು ಎಂಆರ್ ಪಿಎಲ್ ನ ಜಿಎಂ ರುಡಾಲ್ಫ್ ನೊರೊನ್ಹ ಹೇಳಿದರು.
ಅವರು ಕಿನ್ನಿಗೋಳಿ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ
ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕ ಆಯೋಜಿಸಿದ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.
ಮೂಲ್ಕಿ ತಾಲೂಕು ಪತ್ರಕರ್ತರ ಸಂಘದ ನಿಶಾಂತ್ ಶೆಟ್ಟಿ, ಮೂಲ್ಕಿ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಿಥುನ ಕೊಡೆತ್ತೂರು ಪದಾಧಿಕಾರಿಗಳಾದ ಜೊಸ್ಸಿ ಪಿಂಟೋ, ಹೆರಿಕ್ ಪಾಯಸ್, ಸ್ವರಾಜ್ ಶೆಟ್ಟಿ, ಸಚ್ಚಿದಾನಂದ ಉಡುಪ, ಶರತ್ ಶೆಟ್ಟಿ ಅನಿಕೇತ್ ಉಡುಪ ಮತ್ತಿತರರಿದ್ದರು.