
ಮೇ.11- 12 ಕಟೀಲಿನಲ್ಲಿ ಸಂಗೀತ ಶಿಬಿರ
Sunday, May 5, 2024
ಕಟೀಲು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಜಪೆ ಶಾಂತಿ ಕಲಾ ಕೇಂದ್ರ ಹಾಗೂ ಪುತ್ತೂರು ಸಾಧನಾ ಸಂಗೀತ ಪ್ರತಿಷ್ಟಾನಗಳ ಸಹಯೋಗದಲ್ಲಿ ವಿದುಷಿ ಡಾ. ಸುಚಿತ್ರಾ ಹೊಳ್ಳ ಇವರಿಂದ ಕೃತಿಗಳು ಹಾಗೂ ದಾಸರ ಪದಗಳ ಸಂಗೀತ ಶಿಬಿರ ಮೇ ೧೧ ಮತ್ತು ೧೨ರಂದು ನಡೆಯಲಿದೆ. ೧೩ರಂದು ವಿದ್ಯಾರ್ಥಿಗಳಿಂದ ಕಟೀಲು ದೇವರ ಸನ್ನಿಧಿಯಲ್ಲಿ ಗೋಷ್ಟಿಗಾಯನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ. ಆಸಕ್ತರು ೯೪೪೮೩೬೫೧೧೩ ಸಂಪರ್ಕಿಸಬಹುದಾಗಿದೆ