-->

ಡಬ್ಲ್ಯೂ ಐಎಫ್ ಅಂತರ್ ಜಿಲ್ಲಾ ಸಬ್ ಜೂನಿಯರ್ ಫುಟ್ಬಾಲ್ ಟೂರ್ನಮೆಂಟ್ ಗೆ  ಸಮರ್ಥ್ ಸಿ ರೈ ಆಯ್ಕೆ

ಡಬ್ಲ್ಯೂ ಐಎಫ್ ಅಂತರ್ ಜಿಲ್ಲಾ ಸಬ್ ಜೂನಿಯರ್ ಫುಟ್ಬಾಲ್ ಟೂರ್ನಮೆಂಟ್ ಗೆ ಸಮರ್ಥ್ ಸಿ ರೈ ಆಯ್ಕೆ

ಮೇ 22 ರಂದು ಆರಂಭಗೊಂಡು ಮೇ 29 ರ ವರೆಗೆ ಶಿರ್ಪುರ್, ಧುಲೆ, ಎಮ್ಎಚ್ ಇಲ್ಲಿ ನಡೆಯಲಿರುವ ಡಬ್ಲ್ಯೂ ಐಎಫ್ಎ ಅಂತರ ಜಿಲ್ಲಾ ಸಬ್ ಜೂನಿಯರ್ ಬಾಲಕರ ಪಂದ್ಯಾವಳಿ (Inter-District Sub Junior Boys Tournament ) ಅಂಡರ್13 ಸ್ಪರ್ಧೆಯಲ್ಲಿ ಮುಂಬಯಿ ತಂಡವನ್ನು ಸಮರ್ಥ್ ಸಿ. ರೈ ಪ್ರತಿನಿಧಿಸುತ್ತಿದ್ದಾರೆ.ಈತ ಕನಕಿಯಾ ಇಂಟರ್‌ನ್ಯಾಶನಲ್ ಮೀರಾ ಭಾಯಂದರ್‌ನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿ.ಅಂತರ ಜಿಲ್ಲಾ ಸಬ್ ಜೂನಿಯರ್ಸ್ ಬಾಲಕರ ಟೂರ್ನಮೆಂಟ್ ನಲ್ಲಿ ಆಯ್ಕೆಯಾಗಿರುವ ಸಮರ್ಥ್ ರೈ ಜಿಲ್ಲಾ ಮಟ್ಟದ ಫುಟ್ಬಾಲ್ ಟೂರ್ನಮೆಂಟ್ ಆಟವಾಡಲಿದ್ದಾರೆ‌.ಸಿಎಫ್ಸಿಐ ಕ್ಲಬ್ಬಿನಲ್ಲಿ ಫುಟ್ಬಾಲ್ ನ ತರಬೇತಿ ಪಡೆಯುತ್ತಿರುವ ಸಮರ್ಥ್ ರೈ 290 ಫುಟ್ಬಾಲ್ ಕ್ರೀಡಾಪಟುಗಳಲ್ಲಿ 18 ರ ಆಯ್ಕೆಯಲ್ಲಿ ಒಬ್ಬರಾಗಿದ್ದಾರೆ. 2011 ಜೂನ್ 21 ರಂದು ಮಂಗಳೂರಿನ ಮುಚ್ಚೂರು ಗ್ರಾಮದಲ್ಲಿ ಜನಿಸಿದ ಸಮರ್ಥ್ ರೈ ಮುಂಬಯಿ ನಿವಾಸಿಯಾಗಿದ್ದು ಮಿಾಂಜ ಮಂಜಲ್ತೋಡಿ ಪೊಸನಿಕೆ ಮನೆ ಚಂದ್ರಶೇಖರ್ ರೈ ಮತ್ತು ಮುಚ್ಚೂರು ಕಲ್ಕುಡೆ ಕೈದುಮಾರು ಗುತ್ತು ಕುಶಲ ರೈ ಅವರ ಪುತ್ರ . ಮುಚ್ಚೂರು ಕಲ್ಕುಡೆ  ಲೋಕೇಶ್ ಶೆಟ್ಟಿ ಇವರ ಅಳಿಯ

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807