ದಿನಸಿ ಅಂಗಡಿಗೆ ನುಗ್ಗಿದ ಕಳ್ಳರು,ನಗದು.ಸಾಮಾಗ್ರಿ ಕಳವು
Thursday, May 23, 2024
ಹಳೆಯಂಗಡಿ: ದಿನಸಿ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ನಗದು ಸಹಿತ ಸಾಮಾಗ್ರಿಗಳನ್ನು ಕಳವು ಗೈದು ಪರಾರಿಯಾದ ಘಟನೆ ಹಳೆಯಂಗಡಿ ಸಮೀಪದ ಬೊಳ್ಳೂರು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.
ದಿನಸಿ ಅಂಗಡಿಯ ಶಟರ್ ನ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು 16 ಸಾವಿರ ರೂ. ನಗದು, ಅಂಗಡಿಯಲ್ಲಿದ್ದ ತಿಂಡಿ ತಿನಿಸುಗಳನ್ನು ಹೊತ್ತೊಯ್ದಿದ್ದಾರೆ ಅಲ್ಲದೆ
ಪ್ರಿಡ್ಜ್ ನಲ್ಲಿಟ್ಟಿದ್ದ ಐಸ್ ಕ್ರೀಮ್, ತಂಪು ಪಾನೀಯಗಳನ್ನು ಕುಡಿದು ತ್ಯಾಜ್ಯಗಳನ್ನು ಅಂಗಡಿಯ ಒಳಗೆ ಬಿಟ್ಟು ಪರಾರಿಯಾಗಿದ್ದು, ಒಟ್ಟು ಸುಮಾರು 20 ಸಾವಿರ ರೂ. ನಷ್ಟ ಮೌಲ್ಯದ ನಗದು ಹಾಗೂ ತಿಂದಿ ತಿನಿಸುಗಳನ್ನು ಕಳವುಗೈದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.