-->

ಸಾದಾತ್‌ ಮದಾರಿ ಪೌಂಡೇಶನ್ -ವಾರ್ಷಿಕ ಸಾಮೂಹಿಕ ವಿವಾಹ, ಸೌಹಾರ್ದ ಸಂಗಮ ಕಾರ್ಯಕ್ರಮ

ಸಾದಾತ್‌ ಮದಾರಿ ಪೌಂಡೇಶನ್ -ವಾರ್ಷಿಕ ಸಾಮೂಹಿಕ ವಿವಾಹ, ಸೌಹಾರ್ದ ಸಂಗಮ ಕಾರ್ಯಕ್ರಮ


ಮುಲ್ಕಿ: ಸಾದಾತ್‌ ಮದಾರಿ ಪೌಂಡೇಶನ್‌ ( ರಿ ) ಕೆರೆಕಾಡು ಮುಲ್ಕಿ ಇದರ 20ನೇ ವಾರ್ಷಿಕ ಸಾಮೂಹಿಕ ವಿವಾಹ ಕಾರ್ಯಕ್ರಮ, ಕಥಾ ಪ್ರಸಂಗ ಹಾಗೂ ಶಾಝುಲಿ ರಾತೀಬ್‌, ಸೌಹಾರ್ದ ಸಂಗಮ ಕಾರ್ಯಕ್ರಮವು ಮೇ 25ಮತ್ತು 26ರಂದು ಕೆರೆಕಾಡು ಮಜ್ಲಿಸ್‌ ವಠಾರದಲ್ಲಿ ಜರುಗಲಿದೆ.

ಮೇ 25ರಂದು ಮಗ್ರಿಬ್‌ ನಮಾಝ್‌ ನ ಬಳಿಕ ಅಸೈಯ್ಯದ್‌ ಯಹ್ಯಲ್‌ ಬುಖಾರಿ ತಂಙಳ್‌ ಮಡವೂರು ಕೋಟ ಇವರ ನೇತೃತ್ವದಲ್ಲಿ ಶಾಝುಲಿ ರಾತೀಬ್‌ ನಡೆಯಲಿದೆ. ಮೇ26ರಂದು ಸಂಜೆ 3ಕ್ಕೆ ಹಝ್ರತ್‌ ಸಾದಾತ್‌ ಜುಮಾ ಮಸೀದಿ ಕೋಟೆ ಮಲ್ಲಾರು ಕಾಪು ಇದರ ಖತೀಬರಾದ ತ್ವಯ್ಯಿಬ್ ಫೈಝೀ ಬೊಳ್ಳುರು ಇವರ ನೇತರ್ವದಲ್ಲಿ ಮೌಲಿದ್‌ ಪಾರಾಯಣ, ಅಸರ್‌ ನಮಾಜ್‌ ಬಳಿಕ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಇದರ ಅಧ್ಯಕ್ಷತೆಯನ್ನು ಸಾದಾತ್‌ ಮದಾರಿ ಫೌಂಡೇಶನ್‌ ಸ್ಥಾಪಕಾಧ್ಯಕ್ಷ ಮುಹಮ್ಮದ್‌ ಶಾಫಿ ಮದಾರಿ ವಹಿಸಲಿದ್ದಾರೆ. ಬೊಳ್ಳೂರು ಜುಮಾ ಮಸೀದಿಯ ಝತೀಬ್‌ ಶೈಖುನಾ ಬೊಳ್ಳೂರು ಉಸ್ತಾದ್‌ ಉದ್ಘಾಟಿಸಲಿದ್ದಾರೆ. ಸಮಸ್ತ ಕೇಂದ್ರ ಮುಷಾವರದ ಸದಸ್ಯ ಅಲ್‌ ಹಾಜ್‌ ಬಿ.ಕೆ. ಅಬ್ದುಲ್‌ ಖಾದರ್‌ ಅಲ್‌ ಖಾಸಿಮಿ ಬಂಬ್ರಾಣ ಅವರು ನಿಖಾಹ್‌ ಗೆ ನೇತೃತ್ವ ನೀಡಲಿದ್ದಾರೆ.

ಅದೇ ದಿನ ಸಂಜೆ ಗಂಟೆಗೆ ಸೌಹಾರ್ದ ಸಂಗಮ ಕಾರ್ಯಕ್ರಮ ನಡಯಲಿದ್ದು, ಉದ್ಘಾಟನೆಯನ್ನು ಇರ್ಷಾದ್‌ ದಾರಿಮಿ ಅಲ್‌ ಜಾಝರಿ ನೆರವೇರಿಸಲಿದ್ದಾರೆ. ಚೊಕ್ಕಬೆಟ್ಟು ಎಂಜೆಎಂ ಜುಮಾ ಮಸೀದಿಯ ಖತೀಬ್‌ ಅಝೀಝ್‌ ದಾರಿಮಿ, ಭಾರತೀಯ ಕ್ರೈಸ್ತ ಚರ್ಚ್ ಗಳ ಒಕ್ಕೂಟದ ಅಧ್ಯಕ್ಷ ದೇನಿಯಲ್‌ ದೇವರಾಜ್‌, ಶ್ರೀಗುರು ಚೈತನ್ಯ ಸೇವಾಶ್ರಮ ಬೆಳ್ತಂಗಡಿ ಇದರ ಸಂಸ್ಥಾಪಕ ನೋಣಯ್ಯ ಕಾತಿಪಳ್ಳ ಮೊದಲಾದವರು ಉಪಸ್ಥಿತರಿರುವರು. 

ದುವಾ ಆಶಿರ್ವಚನವನ್ನು ಸೈಯ್ಯದ್‌ ಅಲಿಯಾರ್‌ ತಂಙಳ್‌ ಮಲಪುರಂ ಕೇರಳ ನಡೆಸಿಕೊಡಲಿದ್ದು, ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ. ಕಾದರ್‌, ಮೂಲ್ಕಿ- ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್‌, ಕರ್ನಾಟಕ ವಿ.ಪ. ಸದಸ್ಯ ಮಂಜುನಾಥ ಭಂಡಾರಿ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಇನಾಯತ್‌ ಅಲಿ, ಮಿಥುನ್‌ ರೈ, ವಕ್ಪ್‌ ಸಲಹಾ ಸಮಿತಿಯ ಅಧ್ಯಕ್ಷ ನಾಸೀರ್‌ ಲಕ್ಕಿಸ್ಟಾರ್‌ ಮೊದಲಾದವರು ಉಪಸ್ಥಿತರಿರುವವರು.

ಸಭಾಕಾರ್ಯಕ್ರಮದ ಬಳಿಕ ಝುಬೈರ್‌ ಮಾಸ್ಟರ್‌ ತೊಟ್ಟಿಕ್ಕಲ್‌ ಹಾಗೂ ತಂಡದವರಿಂದ ತಡವರಯಿಲೆ ಸುಲ್ತಾನ್‌ ( ಸೆರೆಮನೆಯಲ್ಲಿದ್ದ ರಾಜಕುಮಾರ) ಇಸ್ಲಾಮಿಕ್‌ ಕಥಾ ಪ್ರಸಂಗ ಕಾರ್ಯಕ್ರಮ ನಡೆಯಲಿದೆ.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807