-->

ತೃತೀಯ ಭಾಷೆ ತುಳುವಿನಲ್ಲಿ ಶೇ 100 ಅಂಕ ಪಡೆದ ಕಟೀಲು ವಿದ್ಯಾರ್ಥಿಗಳು

ತೃತೀಯ ಭಾಷೆ ತುಳುವಿನಲ್ಲಿ ಶೇ 100 ಅಂಕ ಪಡೆದ ಕಟೀಲು ವಿದ್ಯಾರ್ಥಿಗಳು


ಕಟೀಲು : ಪ್ರೌಢಶಾಲೆಯಲ್ಲಿ ತೃತೀಯ ಭಾಷೆ ತುಳುವನ್ನು ಕಲಿಸುವ ಮೂಲ್ಕಿ ತಾಲೂಕಿನ ಏಕೈಕ ಶಾಲೆಯಾಗಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ಈ ಬಾರಿಯ ಎಸ್ ಎಸ್ ಎಲ್ ಸಿಯಲ್ಲಿ ತೃತೀಯ ಭಾಷೆಯಾಗಿ ಪರೀಕ್ಷೆ ಬರೆದ ಐವರು ವಿದ್ಯಾರ್ಥಿಗಳೂ ತೇರ್ಗಡೆಯಾಗಿದ್ದು ನಾಲ್ಕು ಮಂದಿ ಶೇ. 100 ಅಂಕ ಗಳಿಸಿದ್ದಾರೆ. 
ಏಳು ವರ್ಷಗಳಿಂದ ತುಳು ಪಠ್ಯವನ್ನು ತೃತೀಯ ಭಾಷೆಯಾಗಿ ಕಟೀಲು ಪ್ರೌಢಶಾಲೆಯಲ್ಲಿ ಕಲಿಸಲು ಆರಂಭಿಸಲಾಗಿದ್ದು, ಕಳೆದ ವರ್ಷ  11 ಮಂದಿ ಎಸ್ ಎಸ್ ಎಲ್ ಸಿಯಲ್ಲಿ ಉತ್ತೀರ್ಣರಾಗಿದ್ದಾರೆ. 20-21ರಲ್ಲಿ 17 ಮಂದಿ ಏಳು ಮಂದಿ 22-23ರಲ್ಲಿ ಹನ್ನೊಂದು ಹಾಗೆ  ಈ ವರ್ಷ 5 ಮಂದಿ ಎಸ್ ಎಲ್ ಸಿಯಲ್ಲಿ ತೃತೀಯ ಭಾಷೆಯಾಗಿ ತುಳು ಪರೀಕ್ಷೆ ಬರೆದು ತೇರ್ಗಡೆಯಾಗಿದ್ದಾರೆ
. ಪ್ರತೀಕ್ಷಾ, ಅಕಾಶ್ ಕುಲಾಲ್. ಪ್ರಜ್ವಲ್ ಭಂಡಾರಿ, ಪ್ರತೀಕ್ 100 ಶೇ. ಅಂಕ ಗಳಿಸಿದ್ದಾರೆ. 
ಎಂಟನೆಯಲ್ಲಿ 17, ಒಂಭತ್ತನೆಯಲ್ಲಿ 15 ಹಾಗೂ ಹತ್ತನೆಯಲ್ಲಿ 5 ಹೀಗೆ ಪ್ರೌಢಶಾಲೆಯಲ್ಲಿ ಕಳೆದ ವರ್ಷ 37 ಮಂದಿ ತುಳುವನ್ನು ತೃತೀಯ ಭಾಷೆಯಾಗಿ ಕಲಿತ ವಿದ್ಯಾರ್ಥಿಗಳಿದ್ದರು ಎಂದು ಉಪಪ್ರಾಚಾರ್ಯ ರಾಜಶೇಖರ್ ಎಸ್. ತಿಳಿಸಿದ್ದಾರೆ.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807