-->

ಮುಲ್ಕಿ:ಮೇ.23 - ಹಲವೆಡೆ ವಿದ್ಯುತ್ ನಿಲುಗಡೆ

ಮುಲ್ಕಿ:ಮೇ.23 - ಹಲವೆಡೆ ವಿದ್ಯುತ್ ನಿಲುಗಡೆ

ಮಂಗಳೂರು: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ-ಕಾವೂರು ವಿಭಾಗದ 110/11 ಕೆವಿ ಮುಲ್ಕಿ ವಿದ್ಯುತ್ ವಿತರಣಾ ಕೇಂದ್ರ ಹಾಗೂ 11 ಕೆವಿ ಬಳ್ಳುಂಜೆ ವಿದ್ಯುತ್ ಮಾರ್ಗದಲ್ಲಿ ದುರಸ್ತಿ ಕಾಮಗಾರಿ ನಡೆಯಲಿರುವ ಕಾರಣ ಮೇ 23ರ ಗುರುವಾರ ಬೆಳಗ್ಗೆ10ರಿಂದ ಸಂಜೆ 4ರ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.

ಮುಲ್ಕಿ, ಕೆ.ಎಸ್.ರಾವ್ ನಗರ, ಕೊಲ್ನಾಡು ಇಂಡಸ್ಟ್ರಿಯಲ್ ಏರಿಯಾ, ಚೆತ್ರಾಪು, ಬಪ್ಪನಾಡು, ಕುಬೆವೂರು, ಶಿಮಂತೂರು, ಲಿಂಗಪ್ಪಯ್ಯ ಕಾಡು, ಕೊಲಕ್ಕಾಡಿ, ಅತಿಕಾರಿಬೆಟ್ಟು, ಕಿನ್ನಿಗೋಳಿ, ಮೂರು ಕಾವೇರಿ, ಪುನರೂರು, ಬಳ್ಳುಂಜೆ, ಐಕಳ, ಉಲ್ಲಂಜೆ, ಕವತ್ತಾರು, ಪಂಜಿನಡ್ಕ, ದಾಮಸ್ ಕಟ್ಟೆ, ಎಸ್ಕೋಡಿ, ಪಕ್ಷಿಕೆರೆ, ಇಂದಿರಾನಗರ, 10ನೇ ತೋಕೂರು, ಪಾವಂಜೆ, ಎಂ.ಆರ್.ಪಿ.ಎಲ್ ಕಾಲನಿ, ಚೇಳಾಯರು, ಬಳ್ಳುಂಜೆ ವಾಟರ್ ಸಪ್ಲೈ, ಮೆನ್ನಬೆಟ್ಟು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂನ ಪ್ರಕಟನೆ ತಿಳಿಸಿದೆ.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807