ನಂದಿನಿ ಕ್ರಿಕೆಟರ್ಸ್ ಮಲ್ಲಿಗೆ ಅಂಗಡಿಗೆ ಕೊಂಡೇಲ ಚಾಂಪಿಯನ್ಸ್ ಟ್ರೋಪಿ 2024
Wednesday, May 22, 2024
ಕಟೀಲು : 40 ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ತರುಣ ವೃಂದ (ರಿ) ಕೊಂಡೇಲ ಕಟೀಲು ಇವರ ಆಶ್ರಯದಲ್ಲಿ ಕೊಂಡೇಲದ ಮದಕ ಮೈದಾನದಲ್ಲಿ ನಡೆದ 30 ಗಜಗಳ ಲೀಗ್ ಮಾದರಿಯ ಪಂದ್ಯಕೂಟದಲ್ಲಿ ಆಯ್ದ 8 ತಂಡಗಳ ಪಂದ್ಯಾಟದಲ್ಲಿ ಅಂತಿಮವಾಗಿ ನಂದಿನಿ ಕ್ರಿಕೆಟರ್ಸ್ ಮಲ್ಲಿಗೆ ಅಂಗಡಿ ತರುಣ ವೃಂದ ಏ ತಂಡವನ್ನು 34 ರನ್ ಅಂತರದಲ್ಲಿ ಮಣಿಸಿ ಪ್ರಶಸ್ತಿ ತನ್ನದಾಗಿಸಿ ಕೊಂಡಿದೆ. ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಶ್ರೀ ದೇವಿ ಕುಮಾರ ಅಸ್ರಣ್ಣ ಅವರು ಭಾಗವಹಿಸಿ ಮಾತನಾಡಿ
ಸಮಾಜದಲ್ಲಿ ದೈಹಿಕ ಹಾಗು ಮಾನಸಿಕವಾಗಿ ಸದೃಢರಾಗಲು ಅಂಕಣದಲ್ಲಿ ಕ್ರಿಕೆಟ್ ಆಟ ಉತ್ತಮ ವ್ಯಾಯಾಮವಾಗಿದೆ ಎಂದರು.
ಈ ಸಂದರ್ಭ ಕೊಡೆತ್ತೂರು ಹೊಸಮನೆ ಕಿರಣ್ ಶೆಟ್ಟಿ, ಲೋಕಯ್ಯ ಸಾಲಿಯಾನ್ ಕೊಂಡೇಲ , ಕಿರಣ್ ಶೆಟ್ಟಿ ಕಾವೂರ್ ಹಾಗು ತರುಣ ವೃಂದದ ಅಧ್ಯಕ್ಷ ಪ್ರವೀಣ್ ಕೋಟ್ಯಾನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಪಂದ್ಯಕೂಟದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಚೇತನ್ , ನಂದಿನಿ ಕ್ರಿಕೆಟರ್ಸ್ ನ ಮ್ಯಾನ್ ಆ ದಿ ಮ್ಯಾಚ್ ಪ್ರಶಸ್ತಿಯನ್ನು ಸಚಿನ್ ,ಉತ್ತಮ ದಾಂಡಿಗ ಹಾಗು ಉತ್ತಮ ಎಸೆತಗಾರ ತರುಣದ ವೃಂದ ತಂಡದ ಶಶಿ ದುರ್ಗಾ ಹಾಗು ವೀರೇಶ್ ಗಾಣಿಗ ಅವರು ಪಡೆದರು. ಅಶೋಕ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.