-->

ಪಾವಂಜೆ: ಬೈಕ್ - ಸ್ಕೂಟರ್ ನಡುವೆ ಅಪಘಾತ - ಬೈಕ್ ಸವಾರ ಗಂಭೀರ

ಪಾವಂಜೆ: ಬೈಕ್ - ಸ್ಕೂಟರ್ ನಡುವೆ ಅಪಘಾತ - ಬೈಕ್ ಸವಾರ ಗಂಭೀರಹಳೆಯಂಗಡಿ : ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಸಮೀಪದ ಪಾವಂಜೆ  ಜಂಕ್ಷನ್ ಬಳಿ ಬೈಕ್ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಬೈಕ್ ಹಾಗೂ ಸ್ಕೂಟರ್ ಸವಾರ , ಸಹಸವಾರಿಣಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ
ಗಾಯಾಳು ಬೈಕ್ ಸವಾರನನ್ನು ಸುರತ್ಕಲ್ ಸಮೀಪದ ಕೃಷ್ಣಾಪುರ ನಿವಾಸಿ ಇಸ್ಮಾಯಿಲ್ ( 45) ಹಾಗೂ ಸ್ಕೂಟರ್  ಸವಾರ ಬಂಟ್ವಾಳ  ಪಣೋಲಿ ಬೈಲು ನಿವಾಸಿ ಮೆಲ್ವಿನ್ ವೇಗಸ್ (48)  , ಸವಾರಿಣಿ ಕಾರಿಲ್ ಲೂಯಿಸ್(32) ಎಂದು ಗುರುತಿಸಲಾಗಿದೆ.
ಗಾಯಾಳು ಸ್ಕೂಟರ್ ಸವಾರ ಮಂಗಳೂರು ಕಡೆಯಿಂದ ಮುಲ್ಕಿ ಕಡೆಗೆ ಬರುತ್ತಿದ್ದು ಪಾವಂಜೆ ಜಂಕ್ಷನ್ ಬಳಿ ಹೆದ್ದಾರಿ ಯಲ್ಲಿ ಏಕಾಏಕಿ ಬಲ ಬದಿಗೆ ತಮ್ಮ ಸ್ಕೂಟರನ್ನು ತಿರುಗಿಸಲು ಯತ್ನಿಸಿದಾಗ ಹಿಂದಿನಿಂದ ಬಂದ  ಬೈಕ್ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಬೈಕ್ ಸವಾರ ಹಾಗೂ ಸ್ಕೂಟರ್ ಸವಾರ ,ಸಹ ಸವಾರಿಣಿ ಗಂಭೀರ ಗಾಯಗೊಂಡಿದ್ದು ಕೂಡಲೇ ಸ್ಥಳೀಯರು ಗಾಯಾಳುವನ್ನು  ಆಸ್ಪತ್ರೆಗೆ ದಾಖಲಿಸಿದ್ದಾರೆ.. 
ಸ್ಕೂಟರ್ ಸವಾರನ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807