
ಮೇ.9-12ರ ತನಕ ಯೋಗ ಜೀವನ ದರ್ಶನ' -ಯೋಗ ಪ್ರಶಿಕ್ಷಣ ಶಿಬಿರ
Tuesday, May 7, 2024
ಮಂಗಳೂರು : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ(ಎಸ್‍ಪಿವೈಎಸ್‍ಎಸ್) ಮೇ 9ರಿಂದ 12ರವರೆಗೆ ಜಿಲ್ಲೆಯ ಮೂರು ಕಡೆಗಳಲ್ಲಿ ಏಕಕಾಲದಲ್ಲಿ `ಯೋಗ ಜೀವನ ದರ್ಶನ' ಎಂಬ ಯೋಗ ಪ್ರಶಿಕ್ಷಣ ಶಿಬಿರಗಳು ನಡೆಯಲಿವೆ.
ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಸಾಮಾನ್ಯ ಪ್ರಶಿಕ್ಷಣ ಶಿಬಿರ ನಡೆದರೆ, ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ(ತೆಂಕಿಲ) ಮತ್ತು ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಓಂ ಜನಹಿತಾಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರಮವಾಗಿ ಮಕ್ಕಳ ಪ್ರಶಿಕ್ಷಣ ಶಿಬಿರ 1 ಮತ್ತು ಮಕ್ಕಳ ಪ್ರಶಿಕ್ಷಣ ಶಿಬಿರ 2 ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.