-->
ಕಟೀಲು ಯಕ್ಷಗಾನ ಮೇಳದ ಕಲಾವಿದರಿಗೆ ಸನ್ಮಾನ

ಕಟೀಲು ಯಕ್ಷಗಾನ ಮೇಳದ ಕಲಾವಿದರಿಗೆ ಸನ್ಮಾನ

ಕಟೀಲು:ಕಟೀಲು ಶ್ರೀದುರ್ಗಾಪರಮೇಶ್ಬರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷಗಾನ ಬಯಲಾಟ ಕಟೀಲಿನಲ್ಲಿ ನಡೆದ ಸಂದರ್ಭ ಮೂರು ದಶಕಗಳಿಂದ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಧರ ಪಂಜಾಜೆ ಹಾಗೂ ನಾರಾಯಣ ಕುಲಾಲ್ ಅವರನ್ನು ಸಂಮಾನಿಸಲಾಯಿತು. 
ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಕಲಾವಿದರನ್ನು ಅಭಿನಂದಿಸಿದರು. 
ಅನಂತಪದ್ಮನಾಭ ಆಸ್ರಣ್ಣ. ಕಮಲಾದೇವೀಪ್ರಸಾದ ಆಸ್ರಣ್ಣ. ಸೇವಾಕರ್ತರಾದ ಸೇವಾಕರ್ತರಾದ ಭಾಸ್ಕರ ಆಳ್ವ. ಶ್ರೀಮತಿ ಅಮಿತಾ ಆಳ್ವಾ. ರಚನ್ ಆಳ್ವ. ಗಂಗಾಧರ ಆಳ್ವ ರಾಜೇಂದ್ರ ಶೆಟ್ಟಿ ಮಾಗಂದಡಿ ಆನಂದ ರೈ. ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ. ಶ್ರೀಮತಿ ಹೇಮಲತಾ ಶೆಟ್ಟಿ ಮತ್ತಿತರರಿದ್ದರು
ವಾಸುದೇವ ಶೆಣೈ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article