ಸೇವಾ ಸಂಸ್ಥೆಯ ಮೂಲಕ ಅಸಹಾಯಕರ ಧ್ವನಿಯಾಗಿ -ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ
Wednesday, May 8, 2024
ಮುಲ್ಕಿ: ಸೇವಾ ಸಂಸ್ಥೆಯ ಮೂಲಕ ಅಸಹಾಯಕರ ಧ್ವನಿಯಾಗಿ ಉದ್ಯಮದ ಮೂಲಕ ಸಾಧಕರಾಗಿ ದಿನೇಶ್ ಶೆಟ್ಟಿ ರವರ ಸಾಧನೆ ಪ್ರಶಂಸನೀಯ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ಆಧ್ಯಾತ್ಮಿಕ ಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಅವರು ತಮ್ಮ ಆಶ್ರಮದಲ್ಲಿ
ಮುಲ್ಕಿ ಜೆಸಿ ಸಂಸ್ಥೆಯ ಮಾಜೀ ಅಧ್ಯಕ್ಷ ದಿನೇಶ್ ಶೆಟ್ಟಿ ರವರನ್ನು ಉದ್ಯಮ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಜೀವನ ಶ್ರೇಷ್ಠ ಸಾಧನೆಗೆ ಸಾಧನಾಶೀಲ ಪ್ರಶಸ್ತಿ-2024 ನೀಡಿ ಗೌರವಿಸಿ ಮಾತನಾಡಿದರು
ಈ ಸಂದರ್ಭ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕರಾದ ರಜನಿ ಸಿ ಭಟ್, ರಾಹುಲ್ ಚಂದ್ರಶೇಖರ್, ಸಂಚಾಲಕರಾದ ಗುರುಪ್ರಸಾದ್ ಭಟ್ ಮುಂಡ್ಕೂರು, ಪುನೀತ್ ಕೃಷ್ಣ , ಭದ್ರತಾ ಸಿಬ್ಬಂದಿ ಪ್ರದೀಪ್ ಗೌಡ, ರಾಜು ಮತ್ತಿತರರು ಉಪಸ್ಥಿತರಿದ್ದರು
ಇದೇ ಸಂದರ್ಭದಲ್ಲಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ರ ವರನ್ನು ದಿನೇಶ್ ಶೆಟ್ಟಿ ರವರು ತಮ್ಮ ಸಂಸ್ಥೆಯ ವತಿಯಿಂದ ಸನ್ಮಾನಿಸಿದರು
ಗುರುಪ್ರಸಾದ್ ಭಟ್ ಸ್ವಾಗತಿಸಿದರು. ಪುನೀತ್ ಕೃಷ್ಣ ನಿರೂಪಿಸಿದರು