ಹರೇಕಳ: ಸರ್ಕಾರಿ ಶಾಲೆಯ ಆವರಣಗೋಡೆ ಬಿದ್ದು 7ವರ್ಷದ ಬಾಲಕಿ ಮೃತ್ಯು
Monday, May 20, 2024
ಮಂಗಳೂರು: ಶಾಲೆಯ ಕಾಂಪೌಂಡ್ ಗೋಡೆ ಮೈಮೇಳೆ ಬಿದ್ದು 7ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಹರೇಕಳದಲ್ಲಿ ನಡೆದಿದೆ.
ಹರೇಕಳ ನಿವಾಸಿ ಸಿದ್ದೀಕ್ ಎಂಬವರ ಪುತ್ರಿ, ನ್ಯೂ ಪಡ್ಪು ರೌಲತುಲ್ ಉಲೂಂ ಮದ್ರಸದ ವಿದ್ಯಾರ್ಥಿನಿ ಶಾಝೀಯ ಬಾನು(7) ಮೃತ ಬಾಲಕಿ ಎಂದು ತಿಳಿದು ಬಂದಿದೆ.
ಬಾಲಕಿಯ ಮೇಳೆ ಹರೇಕಳ ಸರ್ಕಾರಿ ಶಾಲೆಯ ಆವರಣಗೋಡೆ ಬಿದ್ದು, ಆಕೆ ಗಂಭೀರ ಗಾಯಗೊಂಡಿದ್ದು, ಬಳಿಕ ಆಕೆ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ.
ಘಟನೆಗೆ ಸಂಬಂಧಿಸಿ ಬಂಟ್ವಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.