-->


ಜಾಗ್ವಾರ್‌ ಪ್ರೀಮಿಯರ್‌ ಲೀಗ್‌: ಟೀಮ್‌ ಮಿರಾಕಲ್‌ ಮಂಗಳಪೇಟೆ ವಿನ್ನರ್

ಜಾಗ್ವಾರ್‌ ಪ್ರೀಮಿಯರ್‌ ಲೀಗ್‌: ಟೀಮ್‌ ಮಿರಾಕಲ್‌ ಮಂಗಳಪೇಟೆ ವಿನ್ನರ್

ಸುರತ್ಕಲ್‌ : ಕೃಷ್ಣಾಪುರ ಯುನೈಟೆಡ್‌ ಜಾಗ್ವಾರ್‌ ಕ್ರಿಕೆಟ್‌ ತಂಡದ ಆಶ್ರಯದಲ್ಲಿ ಮೇ 18-19ರಂದು ಮುದ್ದಣ್ಣ ಕ್ರಿಕೆಟ್‌ ಮೈದಾನದಲ್ಲಿ ಓವರ್‌ ಆರ್ಮ್‌ ಜಾಗ್ವಾರ್‌ ಪ್ರೀಮಿಯರ್‌ ಲೀಗ್‌ ನಡೆಯಿತು.

ಪಂದ್ಯಾಕೂಟದಲ್ಲಿ ಟೀಮ್‌ ಮಿರಾಕಲ್‌ ಮಂಗಳಪೇಟೆ ಪ್ರಥಮ ಬಹುಮಾನ ಪಡೆದುಕೊಂಡು ರೂ. 40,001 ನಗದು ಹಾಗೂ ಶಾಶ್ವತ ಟ್ರೋಪೀಯನ್ನು ತನ್ನದಾಗಿಸಿಕೊಂಡರೆ, ದ್ವಿತೀಯ ಸ್ಥಾನವನ್ನು ಯುನೈಟೆಡ್‌ ಜಾಗ್ವಾರ್‌ ಕೃಷ್ಣಾಪುರ ಪಡೆದುಕೊಂಡು 20,001 ನಗದು ಮತ್ತು ಶಾಶ್ವತ ಟ್ರೋಫಿಯನ್ನು ಪಡೆದುಕೊಂಡಿತು.
 
ಪಂದ್ಯ ಶ್ರೇಷ್ಠ ಪುರಸ್ಕಾರವನ್ನು ಇಸ್ಮಾಯೀಲ್‌ ಪಡೆದುಕೊಂಡರೆ, ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಇರ್ಫಾನ್‌ ಪಡೆದುಕೊಂಡರು.  ಪಂದ್ಯಾಕೂಟದ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ವಿಕ್ಕಿ ಮುಡಿಗೇರಿಸಿಕೊಂಡರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article