ಹವ್ಯಾಸಿ ಯಕ್ಷಗಾನ ಕಲಾವಿದ ವಿಠಲ ಶೆಟ್ಟಿ ನಿಧನ
Thursday, May 16, 2024
ಕಿನ್ನಿಗೋಳಿ : ಪುನರೂರಿನ ಕದ್ರೋಲ್ ನಿವಾಸಿ, ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ಹಾಗೂ ನಿವೃತ್ತ ಪೋಸ್ಟ್ ಮ್ಯಾನ್ ವಿಠಲ ಶೆಟ್ಟಿ ( ೮೯) ಮೇ 13 ರಂದು ಮುಂಬಯಿಯ ಪುತ್ರನ ಮನೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ , ಇಬ್ಬರು ಪುತ್ರರು , ಪುತ್ರಿಯನ್ನು ಅಗಲಿದ್ದಾರೆ. ಅವರು ಬಾಲ್ಯದಲ್ಲಿ ಪುನರೂರು ಮೇಳದಲ್ಲಿ ವೇಷದಾರಿಯಾಗಿ ,ಚೆಂಡೆ ಮದ್ದಳೆ ವಾದಕರಾಗಿಯೂ ಗುರುತಿಸಿಕೊಂಡವರು. ಬಪ್ಪನಾಡು ಯಕ್ಷಗಾನ ಮಂಡಳಿಯ ವಾರದ ತಾಳಮದ್ದಳೆ ಕೂಟದಲ್ಲಿ ಭಾಗವಹಿಸುತ್ತಿದ್ದರು. ಅವರಿಗೆ ಹಲವಾರು ಕಡೆ ಸಮ್ಮಾನಗಳು ಸಂದಿದ್ದು ವೃತ್ತಿಯಲ್ಲಿ ಪುನರೂರು ಶಾಖಾ ಅಂಚೆ ಕಚೇರಿಯಲ್ಲಿ ಪೋಸ್ಟ್ ಮೆನ್ ಆಗಿ ಸುಮಾರು ೨೫ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.