ಕಿಲ್ಪಾಡಿ ವ್ಯಾಸಮಹರ್ಷಿ ವಿದ್ಯಾಪೀಠ ಉತ್ತಮ ಫಲಿತಾಂಶ
Saturday, May 18, 2024
ಮೂಲ್ಕಿ:ಅನಿವಾಸಿ ಭಾರತೀಯರಾದ ಲಂಡನ್ ನಲ್ಲಿ ವಾಸಿಸುತ್ತಿರುವ ಡಾ.ಶಾಂತೇರಿ ಶೆಣೈ ಖ್ಯಾತ ಮುಲ್ಕಿಯ ಸ್ವಾತಂತ್ರ್ಯ ಹೋರಾಟಗಾರರಾದ ಸಾರಸ್ವತ ರತ್ನ ಡಾ.ಮುಲ್ಕಿ ರಾಯಪ್ಪ ಕಾಮತ್ ಇವರ ಮೊಮ್ಮಗಳು ಮೂಲ್ಕಿ ಸಮೀಪದ ಕಿಲ್ಪಾಡಿ ವ್ಯಾಸಮಹರ್ಷಿ ವಿದ್ಯಾಪೀಠ ಶಾಲೆಗೆ ಭೇಟಿ ನೀಡಿ ಶಾಲೆಯ ಉತ್ತಮ ಫಲಿತಾಂಶ ಹಾಗೂ ಶಾಲೆಯ ಪ್ರಗತಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಪ್ರೋತ್ಸಾಹಕರವಾಗಿ ಶಾಲೆಗೆ ಎರಡು ಲ್ಯಾಪ್ ಟಾಪ್ ಗಳು ಹಾಗೂ ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದರು.ಶಾಲಾ ಸಂಚಾಲಕರಾದ ಎಂ.ಪಾಂಡುರಂಗ ಭಟ್ , ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಚಂದ್ರಿಕಾ ಎಸ್.ಭಂಡಾರಿ ಹಾಗೂ ಉಪಪ್ರಾಂಶುಪಾಲರಾದ ಶ್ರೀಮತಿ ಕಾಮಾಕ್ಷಿ ಆರ್ ನಾಯಕ್ ಇವರು ಉಪಸ್ಥಿತರಿದ್ದರು.