-->

ವಿದ್ಯಾರ್ಥಿಗಳ ಸಮಾಗಮ ಹಾಗೂ ಗುರುವಂದನೆʼ ಕಾರ್ಯಕ್ರಮ

ವಿದ್ಯಾರ್ಥಿಗಳ ಸಮಾಗಮ ಹಾಗೂ ಗುರುವಂದನೆʼ ಕಾರ್ಯಕ್ರಮ

ಕಿನ್ನಿಗೋಳಿ: ಶ್ರೀಶಾರದಾ ಪ್ರೌಢ ಶಾಲೆ ಶಿಮಂತೂರು ಇಲ್ಲಿನ 1989-92ನೇ ಸಾಲಿನ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ʼವಿದ್ಯಾರ್ಥಿಗಳ ಸಮಾಗಮ ಹಾಗೂ ಗುರುವಂದನೆʼ ಕಾರ್ಯಕ್ರಮವು ಶಾರದಾ ಸೆಂಟ್ರಲ್‌ ಸ್ಕೂಲ್‌ನ ಸಭಾಂಗಣದಲ್ಲಿ ನಡೆಯಿತು. ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಾಗಿರುವ ಧನಪಾಲ, ಚಂದ್ರಕಲಾ, ಕಾತ್ಯಾಯಿನಿ, ಶಾಂಭವಿ, ರಾಮ್‌ ಭಟ್‌, ವಿಠಲ ಶಾಸ್ತ್ರೀ, ನಿರ್ಮಲ, ಸಂಜೀವ, ಲಲಿತ, ಜೆಸಿಂತಾ, ಶ್ಯಾಮಸುಂದರ, ಶಿಕ್ಷಕೇತರ ಸಿಬ್ಬಂದಿ ರಾಮಣ್ಣ ಹಾಗೂ ನಳಿನಾಕ್ಷಿ ಅವರನ್ನು ಸನ್ಮಾನಿಸಲಾಯಿತು. ದಿವಂಗತರಾದ ರಾಮಚಂದ್ರ ಶಾಸ್ತ್ರೀ, ಕಸ್ತೂರಿ, ಶಿಮಂತೂರು ನಾರಾಯಣ ಶೆಟ್ಟಿ, ಯಶೋವತಿ ಹಾಗೂ ಶಿಕ್ಷಕೇತರ ಸಿಬ್ಬಂದಿಯಾಗಿದ್ದ ಶೇಖರ ಶೆಟ್ಟಿಗಾರ್‌ ಇವರಿಗೆ ಶ್ರದ್ಧಾಂಜಲಿ ನಮನ ಸಲ್ಲಿಸಲಾಯಿತು. 
ಇದೇ ಸಂದರ್ಭ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನವೋದಯ ಇಂಗ್ಲೀಷ್‌ ಹೈಸ್ಕೂಲ್‌ ಹಾಗೂ ಜ್ಯೂನಿಯರ್‌ ಕಾಲೇಜು ಥಾಣೆ ಇದರ ಕಾರ್ಯಾಧ್ಯಕ್ಷ ದಯಾನಂದ್‌ ಎಸ್‌. ಶೆಟ್ಟಿ ಎಳತ್ತೂರುಗುತ್ತು, ಕೆನ್ನಮೆಟಲ್‌ ಇಂಡಿಯಾ ಲಿಮಿಟೆಡ್‌ ಬೆಂಗಳೂರು ವ್ಯವಸ್ಥಾಪಕ ನೀಲಾಧರ ಶೆಟ್ಟಿಗಾರ್‌, ಶಾರದಾ ಸೆಂಟ್ರಲ್‌ ಸ್ಕೂಲ್‌ ಸಂಚಾಲಕ ದೇವಪ್ರಸಾದ ಪುನರೂರು, ಪ್ರಾಂಶುಪಾಲ ಜಿತೇಂದ್ರ ವಿ. ರಾವ್‌ ಉಪಸ್ಥಿತರಿದ್ದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807