ಕಟೀಲು ವಸಂತ ವೇದ ಶಿಬಿರದ ಸಮಾರೋಪ
Thursday, May 9, 2024
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ನಡೆದ ವಸಂತವೇದ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಉಜಿರೆ ಎಸ್.ಡಿ.ಎಂ. ಕಾಲೇಜಿನ ಉಪಪ್ರಾಂಶುಪಾಲ ಪ್ರೊ.ಎಸ್. ಎನ್. ಕಾಕತ್ಕಾರ್ ಮಾತನಾಡಿ, ನಮ್ಮ ಆಚರಣೆ, ಸಂಪ್ರದಾಯಗಳ ವೈಶಿಷ್ಟ್ಯ, ಅವುಗಳ ಪ್ರಸ್ತುತತೆಯ ಕುರಿತು ಮಾತನಾಡಿದರು. ಸಂಧ್ಯಾ ವಂದನಾದಿಗಳನ್ನು ತಪ್ಪದೇ ಅನುಷ್ಠಾನಿಸಿದಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದರು.
ಆನುವಂಶಿಕ ಅರ್ಚಕರಾದ ಕಮಲಾದೇವಿ ಪ್ರಸಾದ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ ಆಶೀರ್ವಚನಗೈದರು.
ಶಿಬಿರದ ಗುರುಗಳಾದ ವೇದಮೂರ್ತಿ ವೇದಮೂರ್ತಿ ವಾಗೀಶ ಆಚಾರ್ಯ ಹಾಗೂ ವೇದಮೂರ್ತಿ ಮಧ್ವೇಶ ಆಚಾರ್ಯ ಮಠದ ಸಾಂದರ್ಭಿಕವಾಗಿ ಮಾತನಾಡಿದರು. ಡಾ. ಎಂ. ಪದ್ಮನಾಭ ಮರಾಠೆ ಸ್ವಾಗತಿಸಿದರು. ಶ್ರೀವತ್ಸ ನಿರೂಪಿಸಿದರು. ೨೪ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಮುಂಬೈನ ಸಂಜೀವನಿ ಚಾರಿಟೇಬಲ್ ಟ್ರಸ್ಟ್ ನ ಡಾ. ಸುರೇಶ್ ರಾವ್ ಇವರು ಶಿಬಿರದ ಪ್ರಾಯೋಜಕತ್ವವನ್ನು ವಹಿಸಿದ್ದರು.