ಕಟೀಲು ದೇವಳ ಶಾಲೆ ಶೇ. 100 ಫಲಿತಾಂಶ
Thursday, May 9, 2024
ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಪ್ರೌಢಶಾಲಾ ವಿಭಾಗದಲ್ಲಿ 2023-24 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಶೇ. 100% ಫಲಿತಾಂಶವನ್ನು ದಾಖಲಿಸಿದೆ. 81 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಧನ್ಯ ಎಸ್ (604), ಶಾರ್ವರಿ (601), ಪ್ರತಿಕ್ಷಾ (589) ಮೊದಲ ಮೂರು ಸ್ಥಾನ ಪಡೆದಿದ್ದು, 14 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ ಆಗಿದ್ದಾರೆ. ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ದೇವಳದ ಆಡಳಿತ ಸಮಿತಿ ಹಾಗೂ ಅರ್ಚಕರ ವೃಂದವು ಅಭಿನಂದಿಸಿದೆ.