ಕಟೀಲು ದೇವಳ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಈ ವರುಷದ ತರಗತಿಗಳ ಆರಂಭೋತ್ಸವ
Friday, May 31, 2024
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಈ ವರುಷದ ತರಗತಿಗಳ ಆರಂಭೋತ್ಸವ ಶುಕ್ರವಾರ ನಡೆಯಿತು.
ಪ್ರೌಢಶಾಲೆಯ ಎಂಟನೇ ತರಗತಿಗೆ ಸೇರ್ಪಡೆಗೊಂಡ ಕಟೀಲು ಆಸುಪಾಸಿನ ಹದಿನೈದರಷ್ಟು ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.
ಆರಂಭೋತ್ಸವಕ್ಕೆ ಕಟೀಲು ದೇಗುಲದ ಅರ್ಚಕ ಶ್ರೀನಿವಾಸ ಆಸ್ರಣ್ಣ, ಕ್ಯಾಪ್ಸ್ ಫೌಂಡೇಷನ್ ಅಧ್ಯಕ್ಷ ಸಿಎ ಚಂದ್ರಶೇಖರ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಲೋಕಯ್ಯ ಸಾಲ್ಯಾನ್, ಮಿಥುನ ಕೊಡೆತ್ತೂರು, ಶಿಕ್ಷಕ ರಕ್ಷಕ ಸಂಘದ ಸುರೇಶ್ ಬಜಪೆ, ಉಪಪ್ರಾಚಾರ್ಯ ರಾಜಶೇಖರ್ ಮತ್ತಿತರರಿದ್ದರು.