-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಕಟೀಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಜನಪದ ನುಡಿತೋರಣ ಕಾರ್ಯಕ್ರಮ

ಕಟೀಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಜನಪದ ನುಡಿತೋರಣ ಕಾರ್ಯಕ್ರಮ

ಕಟೀಲು:ಕಟೀಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಜನಪದ ನುಡಿತೋರಣ ಕಾರ್ಯಕ್ರಮವು ಕನ್ನಡ ಸಾಹಿತ್ಯ ಸಂಘದ ವತಿಯಿಂದ ನಡೆಯಿತು .ಜನಪದ ವಿಚಾರ,  ಕಲೆ ಮತ್ತು ಸಂಸ್ಕೃತಿಯ ಮೆಲುಕು ಎಂಬ ಉಪ ಶೀರ್ಷಿಕೆಯೊಂದಿಗೆ ಕಾರ್ಯಕ್ರಮ ನಡೆಯಿತು .ಕಾಲೇಜಿನ  ವಿದ್ಯಾರ್ಥಿನಿಯರಾದ ತೃಪ್ತಿ , ದಿಯಾ ಮತ್ತು ಅಶ್ವಿನಿ ಯವರ ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಕಟೀಲು ದೇವಳದ 
ಆಡಳಿತ ಮಂಡಳಿಯ  ಅಧ್ಯಕ್ಷ, ಆನುವಂಶಿಕ  ಮೊಕ್ತೇಸರ ಸನತ್ ಕುಮಾರ್ ಕೊಡೆತ್ತೊರು ಗುತ್ತು ಅವರು   ನೆರವೇರಿಸಿದರು. ಅವರು 
 ತಮ್ಮ ಗತಕಾಲದ ಕೃಷಿ ಮನೆತನದ ಬದುಕು ಭಾವನೆಗಳನ್ನು ತೆರೆದಿಡುತ್ತಾ ಪಾರ್ದನ ವನ್ನು ಹಾಡಿ ನುಡಿತೋರಣ ಕಾರ್ಯಕ್ರಮಕ್ಕೆ  ಮನದಾಳದ ಶುಭಹಾರೈಕೆಯನ್ನು ಸಲ್ಲಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜಾನಪದ ವಿದ್ವಾಂಸ ,ಸಾಹಿತಿ ಹಾಗೂ   ಆಕಾಶವಾಣಿಯ ಹಿರಿಯ ನಿವೃತ್ತ ಉದ್ಘೋಷಕರಾದ  ಮುದ್ದು ಮೂಡುಬೆಳ್ಳೆಯವರು ಜನಪದ ನುಡಿತೋರಣ ಕಾರ್ಯಕ್ರಮವನ್ನು ಉದ್ದೇಶಿಸಿ ಜನಪದ ಮತ್ತು ಜಾನಪದ ನಡುವಿನ ವ್ಯತ್ಯಾಸವನ್ನು ತಿಳಿಸಿ ಜನಪದ ವಿಚಾರ  ಕಲೆ ಸಂಸ್ಕೃತಿಯ ಬಗೆಗೆ ಸವಿವರವಾದ ಮಾಹಿತಿಯನ್ನು ನೀಡಿದರು . ಆಡಳಿತ ಮಂಡಳಿಯ ಪ್ರತಿನಿಧಿಗಳಾದ ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು , ಪ್ರವೀಣ್  ಭಂಡಾರಿ ಕೊಡೆತ್ತೂರುಗುತ್ತು
ವಿದ್ಯಾರ್ಥಿ ನಾಯಕ
ಎಲ್.ಕೃಷ್ಣರಾಜ್ ಐತಾಳ್ ವಿದ್ಯಾರ್ಥಿ ಉಪನಾಯಕ
ಪುಷ್ಪರಾಜ್ ಶೆಟ್ಟಿ ಕಾರ್ಯದರ್ಶಿ
ಬಿ. ನಿಶಾ ಉಪಕಾರ್ಯದರ್ಶಿ
ಕನ್ನಡ ಸಾಹಿತ್ಯ ಸಂಘದ ಪ್ರತಿನಿಧಿಗಳಾದ
ತ್ರಿಷಾ ಶೆಟ್ಟಿ, ದ್ವಿತೀಯ ಬಿ.ಕಾಂ
ವಿಶಾಖ, ಮತ್ತು ವೈಶಾಖ್  ಪ್ರಥಮ ಬಿ.ಕಾಂ.ಉಪನ್ಯಾಸಕ,ಉಪನ್ಯಾಸಕೇತರ ಸಿಬ್ಬಂದಿಗಳು,ವಿದ್ಯಾರ್ಥಿಗಳು  ಉಪಸ್ಥಿತರಿದ್ದರು


ವಿದ್ಯಾರ್ಥಿಗಳಾದ ವೈಷ್ಣವಿ ,ನಾಗರಾಜ್ ಮತ್ತು ವೈಶಾಖ್  ಸಂಪನ್ಮೂಲ ವ್ಯಕ್ತಿಗಳ ಜೊತೆಗೆ  ಸಂವಾದದಲ್ಲಿ ಭಾಗಿಯಾದರು. ಪ್ರಥಮ ,ದ್ವಿತೀಯ ಮತ್ತು  ತೃತೀಯ ಬಿ.ಕಾಂ ವಿದ್ಯಾರ್ಥಿಗಳಿಂದ ಜಾನಪದ ಗಾಯನ ನೃತ್ಯ ನಡೆಯಿತು.ವಿದ್ಯಾರ್ಥಿನಿ ಬಿಂದ್ಯಾಾ ಅವರ ಸ್ವರಚಿತ ಕಥೆಯನ್ನು ಹೇಮಲತಾ ವಾಚಿಸಿದರು.ವಿದ್ಯಾರ್ಥಿಗಳಾದ ಲಕ್ಷ್ಮೀಪತಿ ಮತ್ತು ಮೋಹಿತ್ ಪ್ರಾರ್ಥನೆ ನೆರವೇರಿಸಿದರು.ರಂಜನಾ ಭಟ್ ಸಂಪನ್ಮೂಲ ವ್ಯಕ್ತಿಗಳ ಕಿರುಪರಿಚಯವನ್ನು ಮಾಡಿಕೊಟ್ಟರು.ಕಾಲೇಜಿನ ಪ್ರಾಂಶುಪಾಲರಾದ ಡಾ।ವಿಜಯ್ ವಿ ಅವರು ಸ್ವಾಗತಿಸಿದರು.ಕಾಲೇಜಿನ ಕನ್ನಡ ಉಪನ್ಯಾಸಕ ಪ್ರದೀಪ್ ಡಿ.ಎಮ್ ಹಾವಂಜೆ ಕಾರ್ಯಕ್ರಮವನ್ನು ಸಂಘಟಿಸಿ ಪ್ರಾಸ್ತಾವನೆ ಸಲ್ಲಿಸಿದರು. ವಿದ್ಯಾರ್ಥಿನಿ ರಕ್ಷಿತಾ ಧನ್ಯವಾದ ಸಲ್ಲಿಸಿದರು. ದಿಶಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.   ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ