ತೋಕೂರುದ ಪುರ್ಸದ' ತುಳು ಭಕ್ತಿಗೀತೆ ಬಿಡುಗಡೆ
Wednesday, May 15, 2024
ಹಳೆಯಂಗಡಿ : ತೋಕೂರು ಶ್ರೀ ಸುಬ್ರಹ್ಮಣ್ಯ ದೇವರ ಪ್ರತಿಷ್ಠಾ ಮಹೋತ್ಸವದಂದು ಶ್ರೀ ಸುಬ್ರಹ್ಮಣ್ಯ ದೇವರ ಭಕ್ತಿಗೀತೆ ಬಿಡುಗಡೆಯು ಭಾನುವಾರದಂದು ತೋಕೂರಿನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಿತು.ದೇವರ ಪ್ರತಿಷ್ಠಾಪನ ಮಹೋತ್ಸವದ ದಿನ 'ತೋಕೂರುದ ಪುರ್ಸದ' ತುಳು ಭಕ್ತಿಗೀತೆಯು, ಡಮರುಗ ಸೌಂಡ್ಸ್ ಯೂಟೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಯಿತು. ಶ್ರೀಮತಿ ಯಶೋಧ ಆರ್ ಸುವರ್ಣ ಮತ್ತು ಹರಿಪ್ರಸಾದ್ ಪೂಜಾರಿಯವರ ನಿರ್ಮಾಣದಲ್ಲಿ, ತುಳುನಾಡ ಕಲಶ ಜಿ.ಎಸ್.ಗುರುಪುರ ಸಾಹಿತ್ಯ, ಚೈತ್ರ.ಜಿ ಕಲ್ಲಡ್ಕ ರವರ ಧ್ವನಿಯಲ್ಲಿ, ಡಿ.ಎಸ್.ಪ್ರೋಡಕ್ಷನ್ ಕಿನ್ನಿಗೋಳಿ ರವರ ಚಿತ್ರೀಕರಣದ, 'ತೋಕೂರುದ ಪುರ್ಸದ' ತುಳು ಭಕ್ತಿ ಗೀತೆಯನ್ನು ದೇವಸ್ಥಾನದ ತಂತ್ರಿ ವೇದಮೂರ್ತಿ ಶ್ರೀ ಗೋಪಾಲಕೃಷ್ಣ ತಂತ್ರಿ, ಪ್ರಧಾನ ಅರ್ಚಕ ಮಧುಸೂದನ ಆಚಾರ್ಯ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ದೀಲಿಪ್ ರೊಡ್ಕರ್, ಯಶೋಧ ಆರ್ ಸುವರ್ಣ, ಗುರುರಾಜ್ ಎಸ್ ಪೂಜಾರಿ, ಹರಿಪ್ರಸಾದ್ ಜಿ ಶೆಟ್ಟಿ, ಹರಿದಾಸ್ ಭಟ್, ರಾಮಣ್ಣ ದೇವಾಡಿಗ, ಪುರುಷೋತ್ತಮ ಕೋಟ್ಯಾನ್, ಸವಿತಾ ಬೆಳ್ಳಾಯರು, ವಿಪುಲ ಶೆಟ್ಟಿಗಾರ್, ಪುರುಷೋತ್ತಮ ರಾವ್, SSMG ಸ್ಪೋರ್ಟ್ಸ್ ಕ್ಲಬ್ಬಿನ ಅಧ್ಯಕ್ಷ ಜಗದೀಶ ಕುಲಾಲ್, ಪ್ರಧಾನ ಕಾರ್ಯದರ್ಶಿ ದೀಪಕ್ ಸುವರ್ಣ, ಪ್ರಶಾಂತ್ ಕುಮಾರ್ ಬೇಕಲ್, ಮನೋಜ್ ಕುಮಾರ್, ಶಿವ ದೇವಾಡಿಗ, ಪದ್ಮನಾಭ ಶೆಟ್ಟಿ,ಸಂಪತ್ ದೇವಾಡಿಗ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.