-->

ಶಿವಳ್ಳಿ ಸ್ಪಂದನ ತಾಲೂಕು ಕ್ರೀಡಾಕೂಟ, ಸುರತ್ಕಲ್ ವಲಯಕ್ಕೆ ಸಮಗ್ರ ಪ್ರಶಸ್ತಿ

ಶಿವಳ್ಳಿ ಸ್ಪಂದನ ತಾಲೂಕು ಕ್ರೀಡಾಕೂಟ, ಸುರತ್ಕಲ್ ವಲಯಕ್ಕೆ ಸಮಗ್ರ ಪ್ರಶಸ್ತಿಕಟೀಲು : ಇಲ್ಲಿನ ಕ್ರೀಡಾಂಣಗಲ್ಲಿ ನಡೆದ ಶಿವಳ್ಳಿ ಸ್ಪಂದನ ಮಂಗಳೂರು ತಾಲೂಕು ಕ್ರೀಡಾಕೂಟದಲ್ಲಿ ಸುರತ್ಕಲ್ ವಲಯ ಘಟಕ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. 
ರಾಷ್ಟ್ರೀಯ ಟೇಕ್ವಾಂದೂ ಸ್ಪರ್ಧೆಯ ಚಿನ್ನದ ಪದಕ ವಿಜೇತೆ ಸಂಹಿತಾ ಅಲೆವೂರಾಯ ಇವರನ್ನು  ಅಭಿನಂದಿಸಲಾಯಿತು.
ಬಹುಮಾನ ವಿತರಣೆ ಸಮಾರಂಭದಲ್ಲಿ ಕಟೀಲು ದೇಗುಲದ ಅರ್ಚಕ ವೆಂಕಟರಮಣ ಆಸ್ರಣ್ಣ 
ವಾಸುದೇವ ಅಲೆವೂರಾಯ,  ಶ್ರೀನಿವಾಸ ಭಟ್, ಧಾರ್ಮಿಕ ಪರಿಷತ್ ಸದಸ್ಯ ಕೊರ್ಯಾರು ಸುಬ್ರಮಣ್ಯ ಪ್ರಸಾದ್, ಶಿವಳ್ಳಿ ಸ್ಪಂದನ ಅಧ್ಯಕ್ಷ ಕದ್ರಿ ಕೃಷ್ಣ ಭಟ್, ಕಾರ್ಯದರ್ಶಿ ಉದಯಶಂಕರ ರಾವ್, ಅರವಿಂದ ಭಟ್, ಕೋಡು ಸುರೇಶ್ ರಾಜ್ ಭಟ್, ಭರತ್ ರಾವ್ ಪಕ್ಷಿಕೆರೆ, ರಮೇಶ್ ಭಟ್, ಸುನಿಲ್ ತಾಳಿಪಾಡಿ, ಸುಧೀಂದ್ರ ಉಡುಪ ಮಾಡ, ರಾಕೇಶ್ ನೆಜಾರು, ಸಂತೋಷ್ ಭಟ್ ಕೈಯೂರು ಮತ್ತಿತರರಿದ್ದರು. ಕಟೀಲು ವಲಯ ಅಧ್ಯಕ್ಷ ಅನಂತ ಪದ್ಮನಾಭ ಆಚಾರ್ಯ ಸ್ವಾಗತಿಸಿದರೆ, ಕಾರ್ಯದರ್ಶಿ ಡಾ. ಗುರುರಾಜ ಉಡುಪ ಕಾರ್ಯಕ್ರಮ ನಿರೂಪಿಸಿದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807