ಕಟೀಲಿನಲ್ಲಿ ಶಿವಳ್ಳಿ ಕ್ರೀಡೋತ್ಸವ
Sunday, May 12, 2024
ಕಟೀಲು : ಮಂಗಳೂರು ತಾಲೂಕು ಶಿವಳ್ಳಿ ಸ್ಪಂದನದ ತಾಲೂಕು ಮಟ್ಟದ ಕ್ರೀಡೋತ್ಸವ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಶಾಲಾ ಕ್ರೀಡಾಂಗಣಗಳಲ್ಲಿ ನಡೆಯಿತು. ಕಟೀಲು ದೇಗುಲದ ಮೊಕ್ತೇಸರ
ವಾಸುದೇವ ಆಸ್ರಣ್ಣ ಉದ್ಘಾಟಿಸಿದರು.
ಅಖಿಲ ಬ್ರಾಹ್ಮಣ ಮಹಾಸಭಾದ
ಸುಬ್ರಹ್ಮಣ್ಯ ಪ್ರಸಾದ್ ಕೋರ್ಯಾರು ಇವರನ್ನು ಧಾರ್ಮಿಕ ಪರಿಷತ್ತು ಸದಸ್ಯರಾದ ಹಿನ್ನಲೆಯಲ್ಲಿ ಗೌರವಿಸಲಾಯಿತು.
ಮಂಗಳೂರು ತಾಲೂಕು ಅಧ್ಯಕ್ಷ ಕದ್ರಿ ಕೃಷ್ಣ ಭಟ್, ಶ್ರೀನಿವಾಸ ಭಟ್ ಕೋಡು ಶ್ರೀನಿವಾಸ ರಾವ್ ಸುರತ್ಕಲ್ ಕಟೀಲು ವಲಯ ಅಧ್ಯಕ್ಷ ಅನಂತಪದ್ಮನಾಭ ಆಚಾರ್ಯ, ಕಾರ್ಯದರ್ಶಿ ಡಾ. ಗುರುರಾಜ ಉಡುಪ, ರಮೇಶ್ ಭಟ್ ರಾಮಚಂದ್ರ ಉಡುಪ. ರಮೇಶ್ ಭಟ್ ಸುನಿಲ್ ತಾಳಿಪಾಡಿ ಪ್ರಮೀಳಾ ಆಚಾರ್ಯ ಸುಪ್ರಜಾ ಆಚಾರ್. ಭರತ್ ರಾವ್, ಸುರೇಶ್ ರಾಜ್ ಅರವಿಂದ ಭಟ್ ಸುಧೀಂದ್ರ ಮಾಡ, ಅನಂತ ಭಟ್ ಕುಲ್ಲಂಗಲ್ ಮತ್ತಿತರರಿದ್ದರು. ಶಿವಳ್ಳಿ ಸ್ಪಂದನದ ತಾಲೂಕಿನ 13 ಘಟಕಗಳ ಸದಸ್ಯರಿಗೆ ಇಪ್ಪತ್ತಕ್ಕೂ ಹೆಚ್ಚು ಕ್ರೀಡಾ ಸ್ಪರ್ಧೆಗಳು ನಡೆದವು.