-->

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ
ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ
ಸಂಸ್ಕೃತಿ,ಸಂಸ್ಕಾರಕ್ಕೆ ಬೇಸಿಗೆ ಶಿಬಿರಗಳು ಪೂರಕ - ಡಾ.ಹರಿಕೃಷ್ಣ ಪುನರೂರು

ಸಂಸ್ಕೃತಿ,ಸಂಸ್ಕಾರಕ್ಕೆ ಬೇಸಿಗೆ ಶಿಬಿರಗಳು ಪೂರಕ - ಡಾ.ಹರಿಕೃಷ್ಣ ಪುನರೂರು

ಕಿನ್ನಿಗೋಳಿ: ಎಳವೆಯಲ್ಲಿಯೆ ಮಕ್ಕಳಿಗೆ ಸಂಸ್ಕಾರ ಹಾಗೂ  ಸಂಸ್ಕೃತಿಯನ್ನು ಕೊಡುವ   ಕಾರ್ಯ  ಆಗಬೇಕು ಎಂದು  ಕನ್ನಡ ಸಾಹಿತ್ಯ ಪರಿಷ್ಯತ್ ನ ಮಾಜಿ ರಾಜಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಹೇಳಿದರು ಅವರು ಆದಿತ್ಯವಾರದಂದು ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಪುನರೂರು ಪ್ರತಿಷ್ಟಾನದ ವತಿಯಿಂದ ಜನವಿಕಾಸ ಸಮಿತಿ ಸಂಯೋಜನೆಯೊಂದಿಗೆ ನಡೆಯಲಿರುವ ಬಾಲ ವಿಕಾಸ ಶಿಬಿರ 2024 ರ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬೇಸಿಗೆ ಶಿಬಿರಗಳಿಂದ ಮಕ್ಕಳಿಗೆ ಸಂಸ್ಕೃತಿ ಹಾಗೂ ಸಂಸ್ಕಾರ ಸಿಗಲು ಪೂರಕವಾಗಿದೆ ಎಂದರು. ಶಿಬಿರವನ್ನು 
ಕೆ ಭುವನಾಭಿರಾಮ ಉಡುಪ ಅವರು  ಉದ್ಘಾಟಿಸಿದರು. ಈ ಸಂದರ್ಭ  ಪತ್ರಕರ್ತ ಹರೀಶ್ ಹೆಜ್ಮಾಡಿ, ಉಪಾನ್ಯಾಸಕ  ಗುರುಪ್ರಸಾದ್ ಕಟೀಲ್,  ಜನವಿಕಾಸ ಸಮಿತಿಯ ಅಧ್ಯಕ್ಷ ಶಶಿಧರ್ ಕೆರೆಕಾಡು, ಸುರೇಶ್ ರಾವ್ ನೀರಳಿಕೆ, ಜೀವನ್ ಶೆಟ್ಟಿ ಅಂಗಾರಗುಡ್ಡೆ, ದಾಮೋಧರ ಶೆಟ್ಟಿ ಕೊಡೆತ್ತೂರು, ಗೀತಾ ಶೆಟ್ಟಿ, ಶೋಭಾ ರಾವ್,  ಮತ್ತಿತರರು ಉಪಸ್ಥಿತರಿದ್ದರು.
ಪುನರೂರು ಪ್ರತಿಷ್ಟಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಪ್ರಸ್ತಾವನೆಗೈದು ಸ್ವಾಗತಿಸಿ, ಅಕ್ಷತಾ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಹಿತಾ ಉಮೇಶ್    ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ