-->

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಕ ತಜ್ಞರ ಪಾತ್ರ ಮಹತ್ವದ್ದು-ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಕ ತಜ್ಞರ ಪಾತ್ರ ಮಹತ್ವದ್ದು-ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಮುಲ್ಕಿ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಶುಚಿರುಚಿಯಾದ ಅಡುಗೆಯನ್ನು ಉಣಪಡಿಸುವ ಪಾಕತಜ್ಞರ ಪಾತ್ರ ಮಹತ್ವದ್ದು ಎಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ, ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು. 
ಅವರು ಶಿಮಂತೂರಿನ ಖ್ಯಾತ ನಳಪಾಕ ತಜ್ಞ ಸಂತೋಷ್ ಭಟ್ ಹಾಗೂ ಅವರ ಪತ್ನಿ ಶೋಭಾ ಸಂತೋಷ್ ಭಟ್ ರವರನ್ನು  ಸಾಧಕರ ನೆಲೆಯಲ್ಲಿ ತಮ್ಮ ಆಶ್ರಮದ ವತಿಯಿಂದ ಗೌರವಿಸಿ ಮಾತನಾಡಿ ಕಳೆದ 25ಕ್ಕೂ ಮಿಕ್ಕಿ ವರ್ಷಗಳಿಂದ ಶ್ರಮದ ದುಡಿಮೆಯಿಂದ ನಳಪಾಕ ತಜ್ಞರಾಗಿ ಧಾರ್ಮಿಕ ಕ್ಷೇತ್ರದಲ್ಲಿ ಸಂತೋಷ್ ಭಟ್ ರವರ ಸಾಧನೆ ಅನನ್ಯ ಎಂದರು.
ಈ ಸಂದರ್ಭ ಮಾತೃಶ್ರೀ ಶಾರದಮ್ಮ ಗೋವಿಂದ ಭಟ್, ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ.ಸಿ ಭಟ್, ರಾಹುಲ್ ಚಂದ್ರಶೇಖರ್, ರಾಘವ ಸೂರ್ಯ ರೋಷನಿ ಭಟ್ , ಸಂಚಾಲಕರಾದ ಗುರುಪ್ರಸಾದ್ ಭಟ್ ಮುಂಡ್ಕೂರು, ಪುನೀತ್ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಗುರುಪ್ರಸಾದ್ ಭಟ್ ಸ್ವಾಗತಿಸಿದರು ಪುನೀತ್ ಕೃಷ್ಣ ಧನ್ಯವಾದ ಸಮರ್ಪಿಸಿದರು

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807