-->

ಎ.13 ರಿಂದ 20 ರ ತನಕ ಕಟೀಲು ಜಾತ್ರೆ

ಎ.13 ರಿಂದ 20 ರ ತನಕ ಕಟೀಲು ಜಾತ್ರೆ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಎ.13 ರಿಂದ 20 ರವರೆಗೆ ವರ್ಷಾವಧಿ ಉತ್ಸವ ನಡೆಯಲಿದೆ. ಎ. 12  ಕ್ಕೆ ದೊಡ್ಡರಂಗಪೂಜೆ, ಅಂಕುರಾರೋಪಣ, ಎ . 13 ಕ್ಕೆ  ಧ್ವಜಾರೋಹಣ, ರಾತ್ರಿ ಉತ್ಸವಬಲಿ ಸಂಜೆ 5 ರಿಂದ ಯಕ್ಷಲಹರಿ ಕಿನ್ನಿಗೋಳಿ ಇವರಿಂದ ತಾಳಮದ್ದಲೆ ಮೇಘನಾದ ಕಾಳಗ
 ಎ.14 ಕ್ಕೆ ಪ್ರಾತಃ ಯುಗಾದಿ ದೀಪದ ಬಲಿ ರಾತ್ರಿ ಉತ್ಸವ ಬಲಿ ಸಂಜೆ 5 ರಿಂದ ಮಹಿಳಾ ಯಕ್ಷಕೂಟ ಕದ್ರಿ ತಾಳಮದ್ದಲೆ ಎ.15 ರಂದು ಭ್ರಾಮರೀವನದಲ್ಲಿ ಪ್ರತಿಷ್ಠಾವರ್ಧಂತಿ
ರಾತ್ರಿ ಉತ್ಸವ ಬಲಿ, ಮೂಡು ಸವಾರಿ, ಸಂಜೆ 5 ರಿಂದ ಸಾತ್ವಿಕತೇಜ ಕಲಾ ಕೇಂದ್ರ, ಒಡಿಯೂರು ಇವರಿಂದ ಯಕ್ಷಗಾನ - ಸುದರ್ಶನ ವಿಜಯ ಎ.16 ರಂದು ಪ್ರಾತಃ ದೀಪದ ಬಲಿ ರಾತ್ರಿ ಉತ್ಸವ ಬಲಿ, ಸಂಜೆ 5 ರಿಂದ ಕು| ಅನನ್ಯ ಎನ್.ಜಿ. ಬೆಂಗಳೂರು ಇವರಿಂದ ಭರತನಾಟ್ಯ, ರಾತ್ರಿ 7 .ಕ್ಕೆ  ಕಲಾಶ್ರೀ ನೃತ್ಯ ಬಳಗ, ಕದ್ರಿ, ಮಂಗಳೂರು ಇವರಿಂದ ಭರತನಾಟ್ಯ ತಾ. 17 ಕ್ಕೆ ರಾತ್ರಿ ಉತ್ಸವ ಬಲಿ, ಬೆಳ್ಳಿ ರಥೋತ್ಸವ, ಸಂಜೆ 5 ರಿಂದ  ಶಾಸ್ತ್ರೀಯ ಸಂಗೀತ - ಸರ್ವೇಶ್ ದೇವಸ್ಥಳಿ, ಉಜಿರೆ ಇವರಿಂದ ರಾತ್ರಿ 7 ರಿಂದ ಮಿಥುನ್‌ಶ್ಯಾಮ್, ವೈಷ್ಣವಿ ನಾಟ್ಯಶಾಲಾ ಟ್ರಸ್ಟ್, ಬೆಂಗಳೂರು ಇವರಿಂದ ನೃತ್ಯ ನಡೆಯಲಿದೆ.  ಎ.18 ಕ್ಕೆ  ಹಗಲು ಬ್ರಹ್ಮಸನ್ನಿಧಿಯಲ್ಲಿ ಪರ್ವ ರಾತ್ರಿ ಉತ್ಸವಬಲಿ, ಪಡು ಸವಾರಿ, ಸಂಜೆ 5 ರಿಂದ  ಕರ್ನಾಟಕ ಶಾಸ್ತ್ರೀಯ ಸಂಗೀತ, ಕುಮಾರಿ ಶೋಭಿತಾ ಭಟ್ ಹಾಗೂ ಕುಮಾರಿ ಆಶ್ವೀಜಾ ಉಡುಪ ಇವರಿಂದ ರಾತ್ರಿ 7 ರಿಂದ  ನೃತ್ಯರೂಪಕ - ಗಣೇಶ ಜನನ , ಕದ್ರಿ ನೃತ್ಯ ವಿದ್ಯಾನಿಲಯ, ಕದ್ರಿ, ಮಂಗಳೂರು ಇವರಿಂದ ನಡೆಯಲಿದೆ.
ಎ.19 ಕ್ಕೆ ಹಗಲು ಬ್ರಹ್ಮರಥೋತ್ಸವ ನಡೆಯಲಿದೆ. ಅಂದು ಬೆಳಿಗ್ಗೆ 8 ಕ್ಕೆ ಬಲಿ ಹೊರಟು, 9 ಗಂಟೆಗೆ ರಥಾರೋಹಣ, ರಥೋತ್ಸವ ನಡೆಯಲಿದೆ. ರಾತ್ರಿ ಉತ್ಸವಬಲಿ, ಶಯನ ನಡೆಯಲಿದೆ.ದುರ್ಗಾಮಕ್ಕಳ ಮೇಳ ಕಟೀಲು ಇವರಿಂದ ಯಕ್ಷಗಾನ - ವೀರ ಭಾರ್ಗವ ನಡೆಯಲಿದೆ.
 ಎ.20 ಕ್ಕೆ ಪ್ರಾತಃ ಕವಾಟೋದ್ಘಾಟನೆ, ಇಡೀರಾತ್ರಿ ಅವಭೃತೋತ್ಸವ (ಆರಾಟ) ಎಕ್ಕಾರು ಯಾತ್ರೆ, ಬ್ರಹ್ಮರಥೋತ್ಸವ, ತೂಟೆದಾರ, ಶಿಬರೂರು ಕೊಡಮಣಿತ್ತಾಯ ಭೇಟಿ, ಧ್ವಜಾವರೋಹಣ ನಡೆಯಲಿದೆ.  ರಾತ್ರಿ 8 ರಿಂದ  ಭರತನಾಟ್ಯ ವಿಶ್ವಭಾರತಿ ನೃತ್ಯ ಶಾಲೆ, ಬೆಂಗಳೂರು ಇವರಿಂದ ರಾತ್ರಿ 10 ರಿಂದ  ಭರತನಾಟ್ಯ : ವಿ| ರಶ್ಮಿ ಚಿದಾನಂದ ಮತ್ತು ವಿ| ಗೀತಾ ಸರಳಾಯ, ನೃತ್ಯಭಾರತಿ ಕದ್ರಿ ಇವರಿಂದ ಪ್ರದರ್ಶನವಾಗಲಿದೆ. ಉತ್ಸವಾಂಗ ಸರಸ್ವತೀ ಸದನದಲ್ಲಿ ದಿನಂಪ್ರತಿ ಸಾಂಸ್ಕೃತಿಕ ಕಾರ‍್ಯಕ್ರಮಗಳಿವೆ.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807