ಕಿನ್ನಿಗೋಳಿ:ಬಳಕುಂಜೆ ಕೋಟ್ನಾಯಗುತ್ತು ಕರಿಯದೇಸಿಂಗ ರಾಯ ಬೊಳಿಯ ದೇಸಿಂಗರಾಯ ಕಂಬಳಕ್ಕೆ ಶನಿವಾರದಂದು ಚಾಲನೆ ನೀಡಲಾಯಿತು.
ಕೋಟ್ನಾಯಗುತ್ತು ದೈವ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಕಂಬಳದ ಕರೆಗೆ ಕೋಣಗಳನ್ನು ಇಳಿಸುವ ಕ್ರಮ ನಡೆಯಿತು.
ಈ ವೇಳೆ ಬಪ್ಪನಾಡು ದೇವಳದ ಅನುವಂಶಿಕ ಮುಕ್ತಸರ ಮನೋಹರ ಶೆಟ್ಟಿ, ಶಿಬರೂರು ವೇದವ್ಯಾಸ ತಂತ್ರಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ರಾಮದಾಸ್ ಭಟ್ ಮುಂಡೂರು, ವಿಷ್ಣು ರಾಜ್ ಭಟ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಬಳ್ಳುಂಜೆ ಚರ್ಚ್ ಧರ್ಮಗುರು ಪೌಲ್ಸ್ ಸಿಕ್ಟೇರ ಹಾಗೂ ಮೊದಲಾದವರು ಉಪಸ್ಥಿತರಿದ್ದರು.