-->


ಮುಲ್ಕಿ: ವಿಜೃಂಭಣೆಯ ಮುಲ್ಕಿ ರಥೋತ್ಸವ

ಮುಲ್ಕಿ: ವಿಜೃಂಭಣೆಯ ಮುಲ್ಕಿ ರಥೋತ್ಸವ



ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮುಲ್ಕಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು 
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ  ನಜರು ಕಾಣಿಕೆ ಮೆರವಣಿಗೆ ದೇವಳಕ್ಕೆ ತಲುಪುವುದು,ಕ್ಷೇತ್ರದಲ್ಲಿ ಅರ್ಚಕರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ, ಶ್ರೀ ವೆಂಕಟರಮಣ ದೇವರಿಗೆ ಅಭಿಷೇಕ ಮಹಾಪೂಜೆ, ಮಧ್ಯಾಹ್ನ ಮಹಾ ನೈವೇದ್ಯ, ಮಂಗಳಾರತಿ, ಈ ದೇವರು ಯಜ್ಞ ಮಂಟಪಕ್ಕೆ ಹೊರಡುವ ಕಾರ್ಯಕ್ರಮ, ಯಜ್ಞ ಮಹಾಪೂರ್ಣಾಹುತಿ ನಡೆಯಿತು.
ಸಂಜೆ ಯಜ್ಞ ಮಂಟಪದಿಂದ ದೇವರ ದರ್ಶನ ಸಹಿತ ಶ್ರೀ ದೇವರ ಉತ್ಸವ ಹೊರಡುವ ಕಾರ್ಯಕ್ರಮ ನಡೆದು , ಬಲಿಪ್ರದಾನ, ರಥ ಬಲಿ, ಭೂತಬಲಿ, ಅಣ್ಣಪ್ಪ ದೈವದ ಭೇಟಿ, ಸಂಜೆ 6:30 ಗಂಟೆಗೆ ಬ್ರಹ್ಮರಥಾರೋಹಣ, ಭೂರಿ ಸಮಾರಾಧನೆ ನಡೆಯಿತು.
ರಾತ್ರಿ  ಬ್ರಹ್ಮರಥದಲ್ಲಿ ದೀಪ ನಮಸ್ಕಾರ, ರಾತ್ರಿ ಪೂಜೆ, ಬ್ರಹ್ಮರಥೋತ್ಸವ, ವಿಶ್ರಾಂತಿ ಪೂಜೆ, ಚಂದ್ರಮಂಡಲ ಉತ್ಸವ, ವಸಂತ ಪೂಜೆ, ಏಕಾಂತಶಯನ ಪೂಜೆ ನಡೆಯಿತು 
ಈ ಸಂದರ್ಭ ದೇವಸ್ಥಾನದ ಅರ್ಚಕವೃಂದ, ಆಡಳಿತ ಮಂಡಳಿಯ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು

Ads on article

Advertise in articles 1

advertising articles 2

Advertise under the article