ಕಿನ್ನಿಗೋಳಿ : ಕೊಡೆತ್ತೂರು ಶ್ರೀನಿವಾಸ ಭಜನಾ ಮಂಡಳಿಯ ನೇತೃತ್ವದಲ್ಲಿ ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ಒಂದು ವಾರಗಳ ಕಾಲ ನಡೆಯುವ ಬಾಲವಿಕಾಸ ಶಿಬಿರವನ್ನು ಉದ್ಘಾಟಿಸಲಾಯಿತು.
ಯೋಗೀಶ್ ಆಚಾರ್ಯ, ಹರಿರಾಜ ಶೆಟ್ಟಿಗಾರ್. ಪ್ರಥ್ವಿರಾಜ ಆಚಾರ್ಯ, ಮಿಥುನ ಕೊಡೆತ್ತೂರು. ಪ್ರಕಾಶ್ ಕಿನ್ನಿಗೋಳಿ. ಶ್ರೀಮತಿ ಸುಜಾತಾ, ಕಿಶೋರ್ ಶೆಟ್ಟಿ ಮತ್ತಿತರರಿದ್ದರು. 60ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದು ಯೋಗ ಭಜನೆ ಭಗವದ್ಗೀತೆ ಅಭಿನಯ ಮುಂತಾದ ಚಟುವಟಿಕೆಗಳನ್ನು ಶಿಬಿರದಲ್ಲಿ ಆಯೋಜಿಸಲಾಗಿದೆ.