Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲು ಜಾತ್ರೆಯಲ್ಲಿ ಪ್ಲಾಸ್ಟಿಕ್ ಜಾಗೃತಿ

ಕಟೀಲು : ಶ್ರೀ ದುರ್ಗಾ ಪರಮೇಶ್ವರೀ ದೇವಳದಲ್ಲಿ ತಾ. 19ರಂದು ನಡೆಯಲಿರುವ ಹಗಲು ರಥೋತ್ಸವದ ಸಂದರ್ಭ ಬೆಂಗಳೂರಿನ ಕ್ಯಾಪ್ಸ್ ಫೌಂಡೇಷನ್ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಜಗಜಾಗೃತಿ ಮಾಡಲಿದೆ. ಈ ನಿಟ್ಟಿನಲ್ಲಿ ಬರುವ 10 ಸಾವಿರ ಭಕ್ತರಿಗೆ ಬಟ್ಟೆ ಚೀಲಗಳನ್ನು ವಿತರಿಸಲಿದೆ ಎಂದು ಕ್ಯಾಪ್ಸ್ ಫೌಂಡೇಷನ್ ಅಧ್ಯಕ್ಷ ಸಿಎ ಚಂದ್ರಶೇಖರ ಶೆಟ್ಟಿ ಹೇಳಿದರು.
ಬುಧವಾರ ದೇಗುಲದ ಆಡಳಿತ ಮಂಡಳಿ ಹಾಗೂ ಸಿಬಂದಿಗಳ ಸಮ್ಮುಖ ಚೀಲ ಹಾಗೂ ಟೀಶರ್ಟ್ ಅನಾವರಣಗೊಳಿಸಲಾಯಿತು 
ಇದೇ ಸಂದರ್ಭ 700 ಮಂದಿನಕಟೀಲು ದೇಗುಲದ  ಸಿಬಂದಿಗಳು ಹಾಗೂ ಸ್ವಯಂಸೇವಕರಿಗೆ ಟೀಶರ್ಟ್ ನೀಡಲಾಗುವುದು ಎಂದು ತಿಳಿಸಿದ ಚಂದ್ರಶೇಖರ ಶೆಟ್ಟಿ ಈಗಾಗಲೇ ಮುಂಡ್ಕೂರು ಕಜೆ, ಕೊಡೆತ್ತೂರು ತಾಳಿಪಾಡಿ  ಮುಂತಾದ ಬ್ರಹ್ಮಕಲಶೋತ್ಸವ ಸಂದರ್ಭ ಬಟ್ಟೆ ಚೀಲಗಳನ್ನು ವಿತರಿಸಲಾಗಿದೆ. ಶಿಬರೂರು ಬ್ರಹ್ಮಕಲಶೋತ್ಸವದಲ್ಲಿ 50 ಸಾವಿರ ಬಟ್ಟೆ ಚೀಲ ನೀಡಲಾಗುತ್ತಿದೆ. ಮೂಲ್ಕಿ ತಾಲೂಕು, ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ ಅಲ್ಲದೆ ಒಂದು ಸಾವಿರಕ್ಕೂ ಮಿಕ್ಕಿದ ಶಾಲೆಗಳ ಸಾವಿರಾರು ಮಕ್ಕಳಿಗೆ ಬಟ್ಟೆ ಚೀಲ ನೀಡಲಾಗಿದ್ದು ಪ್ಲಾಸ್ಟಿಕ್ ಬಳಸಬೇಡಿ. ಅಂಗಡಿ ಮುಂತಾದ ಕಡೆಗಳಿಗೆ ಹೋದಾಗ ಬಟ್ಟೆ ಚೀಲಗಳನ್ನೇ ಬಳಸಿ ಎನ್ನುವ ಜಾಗೃತಿಗಾಗಿ ಬಟ್ಟೆ ಚೀಲಗಳನ್ನು ನೀಡಲಾಗುತ್ತಿದೆ. ಅಲ್ಲದೆ ನೀರು ಪಾನೀಯ ಕುಡಿಯಲು ಪ್ಲಾಸ್ಟಿಕ್ ಲೋಟೆ ಬಳಸಬೇಡಿ ಎಂದು ಜಾಗೃತಿ ಮೂಡಸಲಾಗುತ್ತಿದೆ. ಸಹಸ್ರಾರು ಮಕ್ಕಳಿಗೆ ಸ್ಟೀಲಿನ ಬಾಟಲಿ ವಿತರಿಸಲಾಗಿದೆ. ಜಾತ್ರೆಗಳಲ್ಲಿ ಸ್ಟೀಲಿನ ಬಾಟಲಿಯಲ್ಲಿ ನೀರು ವಿತರಿಸಿ ಪ್ಲಾಸ್ಟಿಕ್ ಬಳಸದಂತೆ ಮನವರಿಕೆ ಮಾಡಲಾಗುತ್ತಿದೆ ಎಂದು ಹೇಳಿದರು. ಮೂಲತಃ ಮುಂಡ್ಕೂರಿನವರಾದ ಚಂದ್ರಶೇಖರ ಶೆಟ್ಟಿ ಬೆಂಗಳೂರಿನಲ್ಲಿ ಸಿಎ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಂಸ್ಥೆ ನಡೆಸುತ್ತಿದ್ದಾರೆ. ಕಟೀಲು ಕೋಟ ರಾಮಕುಂಜ ಶಾಲೆಗಳಲ್ಲಿ ಸಯನ್ಸ್ ಪಾರ್ಕ್ ಗಳನ್ನು ನಿರ್ಮಿಸಿ ಆಧುನಿಕ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದ್ದಾರೆ.