-->

 ಪಟ್ಲ ಅಭಿಮಾನಿ ಬಳಗದಿಂದ  ಯಕ್ಷಗಾನ,ಸಾಧಕರಿಗೆ ಗೌರವ

ಪಟ್ಲ ಅಭಿಮಾನಿ ಬಳಗದಿಂದ ಯಕ್ಷಗಾನ,ಸಾಧಕರಿಗೆ ಗೌರವ

ಕಿನ್ನಿಗೋಳಿ: ಕಿನ್ನಿಗೋಳಿ ಪಟ್ಲ ಅಭಿಮಾನಿ ಬಳಗದ ವತಿಯಿಂದ  ಕಿನ್ನಿಗೋಳಿ ಬಸ್ ನಿಲ್ದಾಣದ ಬಳಿಯಲ್ಲಿ  ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ  ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೇಳದ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ವಹಿಸಿದ್ದರು. ಕ.ಸಾ.ಪ.ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಉದ್ಯಮಿಗಳಾದ ತಾಳಿಪಾಡಿ ಗುತ್ತು ಧನಪಾಲ ಶೆಟ್ಟಿ,  ರಮನಾಥ ಶೆಟ್ಟಿ ದೇವಸ್ಯ ಕೊಡೆತ್ತೂರು, ಪುರುಷೋತ್ತಮ ಶೆಟ್ಟಿ ಕೊಡೆತ್ತೂರು, ಸ್ವರಾಜ್ ಶೆಟ್ಟಿ, ದೇವಿದಾಸ ಶೆಟ್ಟಿ, ಪ್ರಶಾಂತ್ ಶೆಟ್ಟಿ , ಕೊಡೆತ್ತೂರು ಗುತ್ತು, ನಿಲೇಶ್ ಶೆಟ್ಟಿ, ನಿತಿನ್ ಶೆಟ್ಟಿ ದೇವಸ್ಯ  ಮತ್ತು ಕೊಡೆತ್ತೂರುಗುತ್ತು, ಅರುಣ್ ಶೆಟ್ಟಿ ದೇವಸ್ಯ ಮತ್ತು ಕೊಡೆತ್ತೂರುಗುತ್ತು, ಸಾಯಿನಾಥ ಶೆಟ್ಟಿ ಮುಂಡ್ಕೂರು, ದಯಾನಂದ ಶೆಟ್ಟಿ ಎಳತ್ತೂರು, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು ದೇವಸ್ಯ, ವಿಜಯಕುಮಾರ್ ಶೆಟ್ಟಿ ರಜತಾದ್ರಿ, ನಾಗರಾಜ ಶೆಟ್ಟಿ ಕೊಡೆತ್ತೂರು, ರವಿ ಶೆಟ್ಟಿ ಅತ್ತೂರು   ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಧಕರಾದ  ಯುಗಪುರುಷ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ದೈವಾರಾಧನೆ ನೆಲೆಯಲ್ಲಿ ಜಾರಿಗೆ ಕಟ್ಟೆ ಕೊರಗಜ್ಜ ಕ್ಷೇತ್ರದ ದಿವಾಕರ ಪೂಜಾರಿ, ಸಮಾಜ ಸೇವಕ ಆಪತ್ಬಾಂಧವ ಶೇಖರ ಆಚಾರ್ಯ ಬಂಟ್ವಾಳ ರವರನ್ನು ಸನ್ಮಾನಿಸಲಾಯಿತು ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗಾಗಿ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ರವರನ್ನು ಗೌರವಿಸಲಾಯಿತು ಶರತ್ ಶೆಟ್ಟಿ ಕಿನ್ನಿಗೋಳಿ ನಿರೂಪಿಸಿದರು.  ದಾಮೋದರ್ ಶೆಟ್ಟಿ ಧನ್ಯವಾದ ಸನ್ಮಾನ ಪತ್ರ ವಾಚಿಸಿದರು, ರಘುನಾಥ್ ಕಾಮತ್      ಧನ್ಯವಾದ ಅರ್ಪಿಸಿದರು. ಬಳಿಕ ಯಕ್ಷಗಾನ ಬಯಲಾಟವು  ನಡೆಯಿತು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807