ನಾಳೆ ಎಕ್ಕಾರಿನಲ್ಲಿ ಯಕ್ಷಗಾನ - ದೇವಿಮಹಾತ್ಮೆ
Tuesday, April 30, 2024
ಎಕ್ಕಾರು:ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ನಾಳೆ ಸಂಜೆ 5:45 ರಿಂದ ಎಕ್ಕಾರು ಕಾವರ ಮನೆಯ ಬಳಿಯಲ್ಲಿ ಶ್ರೀದೇವಿಮಹಾತ್ಮೆ ಎಂಬ ಪುಣ್ಯ ಕಥಾಭಾಗವನ್ನು ಆಡಿತೋರಿಸಲಿದ್ದಾರೆ.ಕಲಾಭಿಮಾನಿಗಳಾದ ತಾವೆಲ್ಲರೂ ಆಗಮಿಸಿ ಯಕ್ಷಗಾನವನ್ನು ವೀಕ್ಷಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಎಕ್ಕಾರು ಕಾವರಮನೆಯ ನಿತಿನ್ ಹೆಗ್ಡೆ (ತಿಮ್ಮ ಕಾವ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ರಾತ್ರಿ 8 ರ ನಂತರ ಅನ್ನಸಂತರ್ಪಣೆಯು ನಡೆಯಲಿದೆ.