-->

ಗುರುಪುರ ಬಿಲ್ಲವ ಮಂದಿರದಲ್ಲಿ  ಕ್ಯಾ.ಬೃಜೇಶ್ ಚೌಟ ಪ್ರಾರ್ಥನೆ ಸಲ್ಲಿಕೆ

ಗುರುಪುರ ಬಿಲ್ಲವ ಮಂದಿರದಲ್ಲಿ ಕ್ಯಾ.ಬೃಜೇಶ್ ಚೌಟ ಪ್ರಾರ್ಥನೆ ಸಲ್ಲಿಕೆ

ಕೈಕಂಬ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬೃಜೇಶ್ ಚೌಟ ಅವರು  ಗುರುಪುರ ಬಿಲ್ಲವ ಸಮಾಜ ಸೇವಾ ಸಂಘಕ್ಕೆ ಭೇಟಿ ನೀಡಿ ಶ್ರೀ ನಾರಾಯಣ ಗುರು ಮಂದಿರದಲ್ಲಿ ಗುರುಗಳಿಗೆ ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.ಶಾಸಕ ಡಾ. ಭರತ್ ಶೆಟ್ಟಿ, ಮಂಗಳೂರು ಉತ್ತರ ಮಂಡಲದ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಬಿಲ್ಲವ ಸಂಘದ ಅಧ್ಯಕ್ಷ ಮಹಾಬಲ ಅಮೀನ್, ಪಕ್ಷ ಪ್ರಮುಖರಾದ ಸಂದೀಪ್ ಪಚ್ಚನಾಡಿ, ಶೋಧನ್ ಆದ್ಯಪಾಡಿ, ರಾಜೇಶ್ ಸುವರ್ಣ, ಸಚಿನ್ ಅಡಪ, ಜಿ. ಎಂ. ಉದಯ ಭಟ್, ಸುನಿಲ್ ಜಲ್ಲಿಗುಡ್ಡೆ, ಶ್ರೀಕರ ವಿ. ಶೆಟ್ಟಿ, ಜಿ. ಕೆ. ಸಂದೀಪ್, ನಳಿನಿ ಶೆಟ್ಟಿ, ಸೇಸಮ್ಮ, ಉದ್ಯಮಿ ಚಂದ್ರಹಾಸ ಶೆಟ್ಟಿ ನಾರಳ, ಬಿಲ್ಲವ ಮುಖಂಡರಾದ ಶೀನ ಕೋಟ್ಯಾನ್, ಬಳ್ಳಿ ಚಂದ್ರಶೇಖರ, ದೇವದಾಸ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.ಇದೇ ವೇಳೆ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನ, ವಾಮಂಜೂರು ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನ, ಗುರುಪುರ ಶ್ರೀ ವಜ್ರದೇಹಿ ಮಠ, ಶ್ರೀ ವರದರಾಜ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಸತ್ಯದೇವತಾ ಕುಲದೇವತಾ ಮಂದಿರಕ್ಕೆ ಭೇಟಿ ನೀಡಿದ ಕ್ಯಾ. ಚೌಟ ಅವರು ಪ್ರಾರ್ಥನೆ ಸಲ್ಲಿಸಿದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807