ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ದೇವತಾ ಪ್ರಾರ್ಥನೆ,ಧಾರ್ಮಿಕ ಕಾರ್ಯಗಳು
Thursday, March 28, 2024
ಮುಲ್ಕಿ:ಸೀಮೆಯ ಒಂಬತ್ತು ಮಾಗಣೆಯ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ದೇವತಾ ಪ್ರಾರ್ಥನೆ, ಭದ್ರ ದೀಪ ಸಮರ್ಪಣೆ ಪೂರ್ವಕ ಮುಷ್ಟಿ ಕಾಣಿಕೆ, ಸರ್ಪ ಸಂಸ್ಕಾರ ಸಹಿತ ವಿವಿಧ ಹೋಮ ಹವನಗಳು ದೇವಸ್ಥಾನದ ತಂತ್ರಿಗಳಾದ ಕಳತ್ತೂರು ಕರುಣಾಕರ ತಂತ್ರಿ, ವಿಠಲ್ ಭಟ್ ಮಾರ್ಪಳ್ಳಿ, ದೇವಸ್ಥಾನದ ಅರ್ಚಕ ಶಶಾಂಕ್ ಮುಚ್ಚಿಂತಾಯ ಪೌರೋಹಿತ್ಯದಲ್ಲಿ ನಡೆಯಿತು.
ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವರಾವ್, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಉದ್ಯಮಿ ರಾಮ ಮೂರ್ತಿರಾವ್, ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ, ವಿಪ್ರ ಸಂಪದದ ಅಧ್ಯಕ್ಷ ಸುಧಾಕರ್ ರಾವ್, ವಿಷ್ಣುಮೂರ್ತಿ ಆಚಾರ್ಯ, ದೇವಪ್ರಸಾದ್ ಪುನರೂರು, ಪಟೇಲ್ ವಿಶ್ವನಾಥ ರಾವ್, ಗೋಪಿನಾಥ ರಾವ್, ಸುರೇಶ್ ರಾವ್ ನೀರಳಿಕೆ, ರಾಘವೇಂದ್ರ ರಾವ್ ಕೆರೆಕಾಡು, ಪುರಂದರ ಶೆಟ್ಟಿಗಾರ್, ನವೀನ್ ಶೆಟ್ಟಿ ಪುನರೂರು ಗುತ್ತು, ರವಿ ಶೆಟ್ಟಿ, ರಘುರಾಮ ಪುನರೂರು, ರವೀಂದ್ರ ದೇವಾಡಿಗ, ಉಷಾ ಹರಿಕೃಷ್ಣ ಪುನರೂರು, ಪದ್ಮ ವಾಸುದೇವರಾವ್, ಸಾವಿತ್ರಿ ರಾಮ ಮೂರ್ತಿ, ರಾಮ ಭಟ್, ಕಾಶಿ ವಿಶ್ವನಾಥ ರಾವ್ ಮತ್ತಿತರರು ಉಪಸ್ಥಿತರಿದ್ದರು.