ಮಾ.28 ರಿಂದ ಮಾ.31 ರವರೆಗೆ ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದಲ್ಲಿ ಜಾತ್ರಾ ಮಹೋತ್ಸವ
Monday, March 25, 2024
ಕಿನ್ನಿಗೋಳಿ: ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವ ಮಾ 28 ರಿಂದ ಮಾ 31 ರವರೆಗೆ ನಡೆಯಲಿದೆ. ಮಾ 28 ರಂದು ಅರಸು ಕುಂಜಿರಾಯರ ಭಂಡಾರ ಆಗಮನ. 10.30 ಕ್ಕೆ ಶ್ರೀ ಅರಸು ಕುಂಜಿರಾಯರಿಗೆ ನವಕಪ್ರಧಾನ ಕಲಶಾಭಿಷೇಕ ಬೆಳಿಗ್ಗೆ 11 ಗಂಟೆಗೆ ಧ್ವಜಾರೋಹಣ, ಸಂಜೆ 6.00 ಗಂಟೆಗೆ ದೇಲಂತಬೆಟ್ಟು ಗ್ರಾಮದ ಶಿಬರೂರು ಶ್ರೀ ಉಳ್ಳಾಯ ಹಾಗೂ ಕೊಡಮಣಿತ್ತಾಯ ದೈವದ ಭಂಡಾರ ಆಗಮನ, 6.30 ಕಿಲೆಂಜೂರು ಶ್ರೀ ಸರಳ ಧೂಮಾವತಿ ದೈವದ ಭಂಡಾರ ಆಗಮನ,7.00 ಗಂಟೆಗೆ ಮೂಡ್ರಗುತ್ತು ಶ್ರೀ ಕಾಂತೇರಿ ಧೂಮಾವತಿ- ಬಂಟ ದೈವಗಳ ಭಂಡಾರ ಆಗಮನ, 7.30 , ಕ್ಕೆ ಕೊಯಿಕುಡೆ ಶ್ರೀ ಜಾರಂದಾಯ ದೈವದ ಬಂಟ ದೈವದ ಭಂಡಾರ ಆಗಮನ, ರಾತ್ರಿ 11.00 ಗಂಟೆಗೆ ಶ್ರೀ ಅರಸು ಕುಂಜಿರಾಯರ ನೇಮೋತ್ಸವ, ಮಾ 29 ರಂದು ಬೆಳಿಗ್ಗೆ 5.00 ಗಂಟೆಗೆ ಶ್ರೀ ಉಳ್ಳಾಯ ದೈವದ ನೆಮೋತ್ಸವ, ರಾತ್ರಿ 8.00 ಗಂಟೆಗೆ ಕೊಡಮಣಿತ್ತಾಯ ದೈವದ ನೆಮೋತ್ಸವ, ರಾತ್ರಿ 11.00 ಗಂಟೆಗೆ ಶ್ರೀ ಕಾಂತೇರಿ ಧೂಮಾವತಿ-ಬಂಟ ದೈವದ ನೇಮೋತ್ಸವ, ಮಾ 30 ರಂದು ಸಂಜೆ 6.00 ರಿಂದ ಕುಸಾಲ್ದ ಕಲಾವಿದೆರ್ ಸುರಗಿರಿ ಇವರಿಂದ ತುಳು ನಾಟಕ ಕಥೆ ಏರ್ ಬರೆಪೆರ್,ರಾತ್ರಿ 10.00 ರಿಂದ ಶ್ರೀ ಜಾರಂದಾಯ ಬಂಟ ದೈವದ ನೇಮೋತ್ಸವ, ರಾತ್ರಿ 10.30 ಕ್ಕೆ ಅತ್ತೂರು ಮಾಗಣೆ ಶ್ರೀ ಕೊರ್ದಬ್ಬು ಶ್ರೀ ಬಂಟ ದೈವಗಳ ಭಂಡಾರ ಆಗಮನ 11.30 ಕ್ಕೆ ಶ್ರೀ ಜಾರಂದಾಯ ಬಂಟ ದೈವಗಳ ಬಂಡಿ ಉತ್ಸವ ಹಾಗೂ ಸೂಟೆದಾರ ಸೇವೆ 12.00 ಗಂಟೆಗೆ ಜಾರಂದಾಯ - ಬಂಟ ಹಾಗೂ ಕೋರ್ದಬ್ಬು ಶ್ರೀ ಧೂಮಾವತಿ ದೈವಗಳ ಭೇಟಿ, ರಾತ್ರಿ 1.00 ಶ್ರೀ ಸರಳ ಧೂಮಾವತಿ ಬಂಟ ದೈವದ ನೇಮೋತ್ಸವ, ಮಾ 31 ರಂದು ಬೆಳಿಗ್ಗೆ 6.00 ಕ್ಕೆ ಧ್ವಜಾವರೋಹಣ ಹಾಗೂ ಶ್ರೀ ದೈವಗಳ ಭಂಡಾರ ನಿರ್ಗಮನ ನಡೆಯಲಿದೆ. ಉತ್ಸವದ ಸಂದರ್ಭ ಪ್ರತೀ ದಿನ ಮದ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟನೆ ತಿಳಿಸಿದೆ.