ವ್ಯಾಘ್ರಚಾಮುಂಡಿ ದೈವಸ್ಥಾನದಲ್ಲಿ ಉಗ್ರಾಣ ಹಾಗೂ ತೊರಣ ಮುಹೂರ್ತ
Monday, March 25, 2024
ಎಡಪದವು : ವ್ಯಾಘ್ರ ಚಾಮುಂಡಿ ದೈವಸ್ಥಾನ ಜೀರ್ಣೋದ್ದಾರ ಸಮಿತಿ ಕೊರ್ಡೇಲು ಶಿಬ್ರಿಕೆರೆ ತೆಂಕ ಎಡಪದವು ಮಂಗಳೂರು ತಾಲೂಕು ಇಲ್ಲಿನ ಕೊಂದೋಡಿ ಗಡುಸ್ಥಳದಲ್ಲಿ ನೂತನವಾಗಿ ಊರ ಪರವೂರ ಸಮಸ್ತರ ಸಹಕಾರದಿಂದ ಜೀರ್ಣೋದ್ದಾರಗೊಂಡಿರುವ ಶ್ರೀ ವ್ಯಾಘ್ರ ಚಾಮುಂಡಿ ದೈವದ ಶಿಲಾಮಯ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವವು ಆದಿತ್ಯವಾರದಂದು ಮೊದಲ್ಗೊಂಡು ಮಾ 27 ರ ತನಕ ನಡೆಯಲಿರುವುದು.
ಆಪ್ರಯುಕ್ತ ಮಾ.23ರಂದು ಸಂಜೆ 6ರಿಂದ ಕೋರ್ಡೆಲು ಬಲ್ಲಾಳರ ಮನೆಯಲ್ಲಿ ಧರ್ಮದೈವದ ಪಿಲಿಚಾಮುಂಡಿಗೆ ಮೊಗ ಒಪ್ಪಿಸುವುವಿಕೆ ಹಾಗೂ ಕಲಶಾಭಿಷೇಕವು ನಡೆಯಿತು.ಆದಿತ್ಯವಾರದಂದು ಬೆಳಗ್ಗೆ ಕೋರ್ಡೆಲು ಮನೆಯಿಂದ ಗಡು ಸ್ಥಳಕ್ಕೆ ಹೊರೆಕಾಣಿಕೆಯ ಸಮರ್ಪಣೆಯು ನಡೆಯಿತು. ಬೆಳಿಗ್ಗೆ ಗಡುಸ್ಥಳದಲ್ಲಿ ದೇವತಾ ಪ್ರಾರ್ಥನೆ, ಪುಣ್ಯವಾಚನ, ಗಣಪತಿಹೋಮ, ಉಗ್ರಾಣ ಮಹೂರ್ತ, ತೋರಣ ಮಹೂರ್ತವು ಶ್ರೀ ಐ. ಕೃಷ್ಣ ಅಸ್ರಣ್ಣ ಕುಪ್ಪೆಪದವು ಅವರ ಪೌರೋಹಿತ್ಯದೊಂದಿಗೆ, ವಾಸ್ತುತಜ್ಞ ಬೆಳ್ಳಣ್ಣು ದೊಡ್ಡಮನೆ ಶ್ರೀ ಸರ್ವೇಶ್ ತಂತ್ರಿಯವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಿತು.
ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸುರೇಶ್ ಬಲ್ಲಾಲ್ ಕೋರ್ಡೇಲ್ ,ಕಾರ್ಯಾಧ್ಯಕ್ಷ ಸುದರ್ಶನ ಪ್ರಭು .ಕೆ, ಪ್ರಧಾನ ಕಾರ್ಯದರ್ಶಿ ಗುಣಪಾಲ ಎನ್ ,ಕೋಶಾಧಿಕಾರಿ ಸುಂದರ ನಾಯ್ಕ್ ,ಜೊತೆ ಕೋಶಾಧಿಕಾರಿ ನಾರಾಯಣ ನಾಯ್ಕ್ ,ಜೊತೆ ಕಾರ್ಯದರ್ಶಿ ರಾಜೇಶ್ ನಾಯ್ಕ್ ಭಟ್ರೆಕೋಡಿ,ಸಂಘಟನಾ ಕಾರ್ಯದರ್ಶಿಗಳಾದ ಪುರಂದರ ನಾಯ್ಕ್ ,ನಿತ್ಯಾನಂದ ನಾಯ್ಕ್ ,ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ,ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು,ಸದಸ್ಯರುಗಳು ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.