ಬಳ್ಕುಂಜೆಯಲ್ಲಿ ಕುದಿಕಂಬಳ
Friday, March 29, 2024
ಕಿನ್ನಿಗೋಳಿ:ನೂತನವಾಗಿ ನಿರ್ಮಾಣವಾದ ಜೋಡುಕರೆಯಲ್ಲಿ ಬಳ್ಕುಂಜೆ ಕೋಟ್ನಾಯಗುತ್ತು ಕರಿಯ ದೇಸಿಂಗರಾಯ - ಬೊಳಿಯ ದೇಸಿಂಗರಾಯ ಜೋಡುಕರೆ ಕಂಬಳವು ಎ.6 ಮತ್ತು 7 ರಂದು ನಡೆಯಲಿದ್ದು,ಕಂಬಳದ ಪೂರ್ವಭಾವಿಯಾಗಿ ಕುದಿಕಂಬಳವು ನಡೆಯಿತು.
ಕಂಬಳ ಸಮಿತಿ ಅಧ್ಯಕ್ಷೆ ಮಲ್ಲಿಕಾ ಯಶವಂತ ಶೆಟ್ಟಿ ಬಳ್ಕುಂಜೆಗುತ್ತು ಈ ವೇಳೆ ಮಾತನಾಡಿ ಗ್ರಾಮಸ್ಥರು ಹಾಗೂ ಊರ ಪರವೂರ ಸಹಕಾರದಿಂದ ಬಳ್ಕುಂಜೆಯ ಕೋಟ್ನಾಯಗುತ್ತು ಕಂಬಳವು ಹಲವು ವರ್ಷಗಳ ಬಳಿಕ ನಡೆಯುತ್ತಿದೆ.ಈಗಾಗಲೇ ಹಲವು ಸಮಿತಿಗಳನ್ನು ಮಾಡಲಾಗಿದೆ.ಕಂಬಳ ನಡೆಸುವ ಬಗ್ಗೆ ಹಲವು ಸಭೆಗಳನ್ನು ಈಗಾಗಲೇ ನಡೆಸಲಾಗಿದೆ.ಪಾರ್ಕಿಂಗ್ ,ಕೋಣಗಳ ವಿಶ್ರಾಂತಿ ಧಾಮ ಸಹಿತ ಇನ್ನಿತರ ವ್ಯವಸ್ಥೆಗಳನ್ನು ಮಾಡಲಾಗಿದೆ .ನೂತನವಾಗಿ ನಿರ್ಮಾಣವಾದ ಜೋಡುಕರೆಯಲ್ಲಿ ಕುದಿಕಂಬಳವು ಯಶಸ್ವಿಯಾಗಿ ಎಂದರು.
ಈ ಸಂದರ್ಭ ಜಿಲ್ಲಾ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ,ವೀರೇಂದ್ರ ಪೂಂಜಾ ಕೋಟ್ನಾಯಗುತ್ತು,ಶೇಖರಬಶೆಟ್ಟಿ ಮುಂಡ್ಕೂರು,ಕೃಷ್ಣ ಶೆಟ್ಟಿ ಕವತ್ತಾರು,ಸಂತೋಷ್ ಶೆಟ್ಟಿ ಇನ್ನಾ ಮಡ್ಮಣ್,ಶೇಖರ ಶೆಟ್ಟಿಪಡುಮನೆ,ಪ್ರವೀಣ್ ಶೆಟ್ಟಿ ಮೂಡಲ್ಲ,ಕೇಶವ ಶೆಟ್ಟಿ ಮಿತ್ತಲ್ಲ,ಸುನೀಲ್ ಶೆಟ್ಟಿ ಮಾಗಂದಡಿ,ದಿನಕರ ಶೆಟ್ಟಿ ಬಳ್ಕುಂಜೆಗುತ್ತು,ದಿನೇಶ್ ಸುವರ್ಣ ಬೆಳ್ಳಾಯರು,ಡೆನಿಸ್ ಡಿ ಸೋಜಾ ಬಳ್ಕುಂಜೆ ಹಾಗೂ ಮೊದಲಾದವರು ಉಪಸ್ಥಿತರಿದ್ದರು.