ಕಟೀಲು : ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಪ್ರಿಲ್ 2ರ ಮಂಗಳವಾರ ಮಂಗಳೂರು ವಿವಿ ಮಟ್ಟದ ಅಂತ್ ಕಾಲೇಜು ಪುರುಷರ ಮತ್ತು ಮಹಿಳೆಯರ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ ಪಾಂಪೈ ಕಾಲೇಜು ಪ್ರಾಚಾರ‍್ಯ ಪ್ರೊ. ಪುರುಷೋತ್ತಮ್ ಉದ್ಘಾಟಿಸಲಿದ್ದು, ಸಂಜೆ ಸಮಾರೋಪದಲ್ಲಿ ಆಳ್ವಾಸ್‌ನ ಎಂ.ವಿವೇಕ್ ಆಳ್ವ ಉಪಸ್ಥಿತರಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.