
ಎ.4 -ಕೊಳಚಿಕಂಬಳ ಶ್ರೀ ಜಾರಂದಾಯ ದ್ಯೆವಸ್ಥಾನದ ವರ್ಷಾವದಿ ನೇಮೋತ್ಸವ
Saturday, March 30, 2024
ಮೂಲ್ಕಿ: ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತಕ್ಕೆ ಒಳಪಟ್ಟ ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಶ್ರೀ ಜಾರಂದಾಯ, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವವು ಎ. 3 ರಿಂದ 5 ರ ವರೆಗೆ ಜರಗಲಿದೆ. ಎಪ್ರಿಲ್ 3 ರ ಬುಧವಾರ ಅಪರಾಹ್ನ 4 ಗಂಟೆಗೆ ಭಂಡಾರ ಇಳಿಯುವುದು,ರಾತ್ರಿ ತುಡಾರ ಬಲಿ,ಎ. 4 ರ ಗುರುವಾರ ಬೆಳಿಗ್ಗೆ 10 ಗಂಟೆಗೆ ನಾಗ ಸನ್ನಿಧಿಯಲ್ಲಿ ಅಂಚನ್ ಮೂಲದವರ ನಾಗತಂಬಿಲ ,ಮಧ್ಯಾಹ್ನ 1 ಗಂಟೆಗೆ ಸಾನದ ಮನೆ ದಿ.ರಾಮಣ್ಣ ಪೂಜಾರಿ ಹಾಗೂ ದಿ. ಹರಿಯಪ್ಪ ಕೋಟ್ಯಾನ್ ಸ್ಮರಣಾರ್ಥ ಅವರ ಮಕ್ಕಳಿಂದ ಅನ್ನ ಸಂತರ್ಪಣೆ,
ರಾತ್ರಿ ಶ್ರೀ ಜಾರಂದಾಯ, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ನೇಮೋತ್ಸವ ,ಎ. 5 ಶುಕ್ರವಾರ ಅಪರಾಹ್ನ 3.30ಕ್ಕೆ
ಮಾಯಂದಾಳ ದೈವದ ನೇಮೋತ್ಸವ ನಡೆಯಲಿದೆಯೆಂದು ಪ್ರಕಟಣೆ ತಿಳಿಸಿದೆ.