-->

ಮಾ.10 - ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಬೆಳ್ಳಿ ಹಬ್ಬದ ಸಂಭ್ರಮ,ಸಾಧಕರಿಗೆ ಸನ್ಮಾನ

ಮಾ.10 - ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಬೆಳ್ಳಿ ಹಬ್ಬದ ಸಂಭ್ರಮ,ಸಾಧಕರಿಗೆ ಸನ್ಮಾನ

ಮುಲ್ಕಿ:ಮುಲ್ಕಿಯ ಮಾಜಿ  ಶಾಸಕರಾದ ದಿ.ಕೆ ಸೋಮಪ್ಪ ಸುವರ್ಣ ರವರ ಪರಿಕಲ್ಪನೆಯಲ್ಲಿ ದಿ. ಜಯ ಸಿ ಸುವರ್ಣರ ಮುಂದಾಳುತ್ವದಲ್ಲಿ ಮುಲ್ಕಿ ಬಿಲ್ಲವ ಸಂಘದಲ್ಲಿ ಹುಟ್ಟಿ ಬಂದ ಸಂಸ್ಥೆ  ರಾಷ್ಟ್ರೀಯ ಬಿಲ್ಲವರ ಮಹಾಮಂಡಲ .ಈಗ  275 ಬಿಲ್ಲವ ಸಂಘಗಳ ಸದಸ್ಯತ್ವವನ್ನು ಹೊಂದಿರುವ ಭಾರತದ ಬೃಹತ್ ಬಿಲ್ಲವರ ಒಕ್ಕೂಟವಾಗಿ ಇದು ಕರ್ತವ್ಯ ಪ್ರವೃತ್ತವಾಗಿದೆ.ಇದೀಗ ಸಂಸ್ಥೆಯು 25 ರ ಸಂಭ್ರಮದಲ್ಲಿದ್ದು,ಬೆಳ್ಳಿಹಬ್ಬವನ್ನು ಆಚರಿಸುತ್ತಿದೆ. ಬೆಳ್ಳಿ ಹಬ್ಬದ ಸಮಾರಂಭವು  ಮಾ. 10 ರಂದು ಆದಿತ್ಯವಾರ ಬೆಳಿಗ್ಗೆ 9 ಗಂಟೆಗೆ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಬಳಿಯ ಭವಾನಿ ಶಂಕರ ಕಾಂಪೌಂಡ್ ನಲ್ಲಿ ನಡೆಯಲಿದೆ ಎಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಡಾ. ರಾಜಶೇಖರ ಕೋಟ್ಯಾನ್ ಹೇಳಿದರು.

ಅವರು ಮುಲ್ಕಿಯ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸಭಾಭವನದಲ್ಲಿ  ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.  ಬೆಳ್ಳಿ ಸಂಭ್ರಮವನ್ನು ಮಾಜೀ ಕೇಂದ್ರ ಸಚಿವರಾದ ಜನಾರ್ಧನ ಪೂಜಾರಿ ರವರು ಉದ್ಘಾಟನೆ ಮಾಡಲಿದ್ದಾರೆ.

ದೇಶ ವಿದೇಶದ ಬಿಲ್ಲವರು ಭಾಗವಹಿಸಲಿದ್ದಾರೆ. ಈ ಸಮಾರಂಭದಲ್ಲಿ ಹೊರದೇಶ ಹಾಗೂ ಹೊರರಾಜ್ಯದ ಬಿಲ್ಲವ ಸಂಘಗಳಿಗೆ “ಬಿಲ್ಲವರ ಸಂಘಟನಾ ರತ್ನ" ಪ್ರಶಸ್ತಿ, ಬಿಲ್ಲವ ಶ್ರೇಷ್ಠ ಕಲಾವಿದರಾದ ಸುಮನ್ ತಲ್ವಾರ್, ಜಯಮಾಲಾ, ನವೀನ್ ಡಿ.ಪಡೀಲ್ ಇವರಿಗೆ " ಬಿಲ್ಲವ ಕಲಾ ಸಾಮ್ರಾಟ" ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು, ಜಯರಾಮ್ ಬನಾನ್, ಬನ್ನಂಜೆ ಬಾಬು ಅಮೀನ್, ರಾಜ್ ಕುಮಾರ್ ಬೆಹರಿನ್ ಹಾಗೂ ದಿನೇಶ್ ಅಮೀನ್ ಮಟ್ಟು ಇವರಿಗೆ ಗೌರವ ಸನ್ಮಾನ


ಸ್ಮರಣ ಸಂಚಿಕೆ “ ರಜತ ವಿಶ್ವವಾಣಿ – ಜಯಸಿರಿ" ಯ ಬಿಡುಗಡೆ, ಸ್ಥಾಪಕ ಸದಸ್ಯರಿಗೆ ಅಭಿನಂದನೆ, ಆಯ್ದಅರ್ಹ ವಿಶೇಷ ಚೇತನ ಮಕ್ಕಳ ಅಭಿವೃದ್ದಿ ಸಂಸ್ಥೆಗಳಿಗೆ ಸಹಾಯ ಧನ ನೀಡುವ ಕಾರ್ಯಗಳು ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಸೋಲೂರು ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಧರ್ಮಸ್ಥಳ ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸ್ವಾಮೀಜಿ, ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಸಹಿತ ರಾಜ್ಯ ಸಚಿವರು, ಶಾಸಕರು ಮಾಜಿ ಶಾಸಕರು, ಸಮಾಜದ ಸ್ವಾಮೀಜಿಯವರು, ದೇಶ ವಿದೇಶದ ಬಿಲ್ಲವ ಮುಖಂಡರು ಹಾಗೂ  ಇತರ ಗಣ್ಯರು ಭಾಗವಹಿಸಲಿದ್ದಾರೆ.
ಈ ಬೆಳ್ಳಿಹಬ್ಬವು ಬಿಲ್ಲವ ಜನಾಂಗದ ಆಶೋತ್ತರಗಳನ್ನು ಈಡೆರಿಸುವ ಕಾರ್ಯಕ್ರಮವಾಗಿ ರೂಪುಗೊಳ್ಳಲಿದೆ. ಬಿಲ್ಲವರಿಗೆ ಪ್ರತ್ಯೇಕ ನಿಗಮದ ಘೋಷನೆ, ಬಿಲ್ಲವರಿಗೆ ಕಾದಿರಿಸುವಿಕೆಗಳು, ಬಿಲ್ಲವ ಕಸುಬಿಗೆ ಕಾದಿರಿಸುವಿಕೆ, ರಾಜಕೀಯದ ಎಲ್ಲಾ ಪಕ್ಷಗಳಲ್ಲಿ ಬಿಲ್ಲವರಿಗೆ ಮಾನ್ಯತೆ, ಬಿಲ್ಲವರ ಸಂಘಗಳ ಮುಖಾಂತರ ಬಡ ಬಿಲ್ಲವರ ಏಳಿಗೆ, ಬಿಲ್ಲವ ಸಂಘಗಳಿಗೆ ಅನುದಾನ ಮೊದಲಾದ ಸರಕಾರಿ ಸೌಲಭ್ಯಗಳ ಬಗ್ಗೆ ಹಕ್ಕು ಒತ್ತಾಯ ಮಾಡುವ ಕಾರ್ಯಕ್ರಮವಾಗಿರ ಬೇಕೆಂಬುವುದು ನಮ್ಮ ಆಸೆ ಎಂದರು.

ಬೆಳ್ಳಿ ಹಬ್ಬ ಸಂಭ್ರಮದ ಪೂರ್ವಭಾವಿಯಾಗಿ ಮಾರ್ಚ್ 9 ರಂದು ಪೂರ್ವಾಹ್ನ ಸುಮಾರು 100 ಋತ್ವಿಜರಿಂದ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಸಭಾಭವನದ ಬಳಿ ಲೋಕಕಲ್ಯಾಣಾರ್ಥವಾಗಿ ವಿಶ್ವಶಾಂತಿ ಮಹಾ ಯಾಗ ನಡೆಯಲಿದೆ ಎಂದರು ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಹರೀಶ್ ಡಿ ಸಾಲ್ಯಾನ್, ಗಣೇಶ್ ಪೂಜಾರಿ ಮೂಡುಪೆರಾರ, ಪ್ರಭಾಕರ ಬಂಗೇರ ಕಾರ್ಕಳ, ಬಾಳ ಗಂಗಾಧರ ಪೂಜಾರಿ ಚೇಳಾಯರು, ಶಿವಾಜಿ ಸುವರ್ಣ ಬೆಳ್ಳೆ,ಮತ್ತು ಬಿ.ಬಿ ಪೂಜಾರಿ,ತಿಮ್ಮಪ್ಪಕೋಟ್ಯಾನ್ ,ಸುರೇಶ್ ಪೂಜಾರಿ ಕುಳಾಯಿ, ಉಪಸ್ಥಿತರಿದ್ದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807