-->

ಮಳಲಿ:ಶ್ರೀ ಕಾಲಭೈರವ ಹಾಗೂ ಶ್ರೀ ಜ್ವಾಲಾ  ಮಹಾಮ್ಮಾಯಿ ದೇವರಿಗೆ ಬ್ರಹ್ಮಕಲಶಾಭಿಷೇಕ ,

ಮಳಲಿ:ಶ್ರೀ ಕಾಲಭೈರವ ಹಾಗೂ ಶ್ರೀ ಜ್ವಾಲಾ ಮಹಾಮ್ಮಾಯಿ ದೇವರಿಗೆ ಬ್ರಹ್ಮಕಲಶಾಭಿಷೇಕ ,

ಬಜಪೆ;ಮಳಲಿ ಮಟ್ಟಿ ಜೋಗಿಮಠ ಶ್ರೀ ಕಾಲಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಫೆ.20 ರಿಂದ ಫೆ.26 ರ ತನಕ   ನಡೆಯಲಿರುವ ಬ್ರಹ್ಮಕಲಶದ ಪುಣ್ಯೋತ್ಸವದ ಅಂಗವಾಗಿ ಇಂದು  ಬೆಳಿಗ್ಗೆ  ಶ್ರೀ ಧೂಮಾವತಿ ಬಂಟ ಮಹಿಷಂದಾಯ ದೈವಸ್ಥಾನದಲ್ಲಿ ದೈವ ಶುದ್ದಿ,ಗಣಪತಿ ಹೋಮ,ನಂತರ ಮಲರಾಯ ಬಂಟ,ಅಣ್ಣಪ್ಪ ಪಂಜುರ್ಲಿ  ಹಾಗೂ ಗುಳಿಗ ದೈವಗಳ ಪ್ರತಿಷ್ಠೆ,ಕಲಶಾಭಿಷೇಕ  ಕಲ್ಲುರ್ಟಿ ಪಂಜುರ್ಲಿ ದೈವಗಳ ಕಲಶಾಭಿಷೇಕ,ಪರ್ವ ಸೇವೆ,ಶ್ರೀ ಕಾಲಭೈರವ ಹಾಗೂ ಶ್ರೀ ಜ್ವಾಲಾ  ಮಹಾಮ್ಮಾಯಿ ದೇವರಿಗೆ ಬ್ರಹ್ಮಕಲಶಾಭಿಷೇಕ ,ಚಂಡಿಕಾಯಾಗ,ಅಷ್ಟಭೈರವ ಯಾಗ  ಹಾಗೂ ಮಹಾಪೂಜೆಯು ವಿಜೃಂಭಣೆಯಿಂದ ನಡೆಯಿತು.ಈ ಸಂದರ್ಭ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಕಿರಣ್ ಪಕ್ಕಳ ಪೆರ್ಮಕಿಗುತ್ತು,ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ ನಾರಳ,ಕೋಶಾಧಿಕಾರಿ ಸೋಹನ್ ಅತಿಕಾರಿ ಭಾವಂತಿ ಬೆಟ್ಟು,ಪ್ರಧಾನ ಕಾರ್ಯದರ್ಶಿ ಹರೀಶ್ ಮಟ್ಟಿ ,ಕ್ಷೇತ್ರದ ಪ್ರಧಾನ ಅರ್ಚಕ ಉಮೇಶ್ ನಾಥ್ ಕದ್ರಿ,ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶೇಖರ್ ಜೋಗಿ,ಕ್ಷೇತ್ರದ ಆಡಳಿತ ಮೊಕ್ತೇಸರ ಗಂಗಾಧರ ಜೋಗಿ,ಆಡಳಿತ ಸಮಿತಿ,ಜೀರ್ಣೋದ್ದಾರ ಸಮಿತಿ ಬ್ರಹ್ಮ ಕಲಶ ಸಮಿತಿ ಯ ಪದಾಧಿಕಾರಿಗಳು , ಬಡಗುಳಿಪಾಡಿ,ತೆಂಕುಳಿಪಾಡಿ, ಮೊಗರು ಗ್ರಾಮಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.ನಾಳೆ  ಬೆಳಿಗ್ಗೆ 6 ರಿಂದ ಪುಣ್ಯಾಹ,ದಶದಾನ,ಗೋಪೂಜೆ,ಕವಾಟೋದ್ಘಾಟನೆ
ಬೆಳಿಗ್ಗೆ 11:20ರಿಂದ ಮೇಷ ಲಗ್ನದಲ್ಲಿ ಶ್ರೀ ಮಂಜುನಾಥ ದೇವರಿಗೆ  ಬ್ರಹ್ಮಕಲಶಾಭಿಷೇಕದ ಪುಣ್ಯೊತ್ಸವ,ಮಹಾಪೂಜೆ,ಅವಸ್ರುತ ಬಲಿ,ಪಲ್ಲಪೂಜೆ ,12:30 ರಿಂದ ಮಹಾ ಅನ್ನ ಸಂತರ್ಪಣೆ ಸಂಜೆ 7 ರಿಂದ ರಂಗಪೂಜೆ,ಉತ್ಸವ ಬಲಿ,ಮಹಾಪೂಜೆ,ಪ್ರಸಾದ ವಿತರಣೆ
ಬೆಳಿಗ್ಗೆ 9 ರಿಂದ 12 ರ ಭಜನಾ ಸಂಕೀರ್ತಣೆ,11 ರಿಂದ  ಶಾಲಾ ಮಕ್ಕಳಿಂದ ಸಾಂಸೃತಿಕ ಕಾರ್ಯಕ್ರಮ,ಮಧ್ಯಾಹ್ನ 1:30 ರಿಂದ ಯಕ್ಷಗಾನ ನಾಟ್ಯ ವೈಭವ ಹಾಗೂ ಸಂಜೆ 5:30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ 
ಫೆ.25  ಬೆಳಿಗ್ಗೆ 7:30 ರಿಂದ ಶ್ರೀ ಕಾಲ ಭೈರವ ಮಂಜುನಾಥೇಶ್ವರ ದೇವರಿಗೆ ಪೂಜೆ ,8 ಕ್ಕೆ ಶ್ರೀ ಧೈವಗಳ ಭಂಡಾರ ಆಗಮನ,ಮಹಾಪೂಜೆ ರಾತ್ರಿ 7:30 ರಿಂದ ಮಹಿಷಂದಾಯ,ಅಣ್ಣಪ್ಪ ಪಂಜುರ್ಲಿ,ಮಲರಾಯ ಬಂಟ,ಮರಳು ಧೂಮಾವತಿ ಬಂಟ ದೈವಗಳಿಗೆ ನೇಮೋತ್ಸವ 

ಫೆ.26 ಬೆಳಿಗ್ಗೆ ಶ್ರೀ ಕಾಲಭೈರವ  ಮಂಜುನಾಥೇಶ್ವರ ದೇವರಿಗೆ ಪೂಜೆ ,ರಾತ್ರಿ 8:30ಕ್ಕೆ ಕಲ್ಲುರ್ಟಿ ಪಂಜುರ್ಲಿ ,ಗುಳಿಗ ದೈವಗಳಿಗೆ  ಕೋಲಬಲಿ ಸೇವೆಯು ನಡೆಯಲಿದೆ. 

ಪ್ರತಿದಿನ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣೆ ಸೇವೆ ಇದೆ.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807